×
Ad

ಪೊಲೀಸರ ಪ್ರತಿಭಟನೆಗೆ ಅಂಕೋಲಾ ನಾಗರಿಕರ ಬೆಂಬಲ

Update: 2016-05-30 22:04 IST

 ಅಂಕೋಲಾ, ಮೇ 30: ಪೊಲೀಸರು ವಿವಿಧ ಬೇಡಿಕೆಗಳ ಈಡೇರಿಕೆಗೆ ಜೂ.4 ರಂದು ನಡೆಸಲು ನಿರ್ಧರಿಸಿರುವ ಹೋರಾಟಕ್ಕೆ ಅಂಕೋಲಾದ ನಾಗರಿಕರು ಬೆಂಬಲ ವ್ಯಕ್ತಪಡಿಸಿ ಮನವಿ ಸಲ್ಲಿಸಿದರು. ನ್ಯಾಯವಾದಿ, ಹೋರಾಟಗಾರ ಉಮೇಶ್ ನಾಯ್ಕ ನೇತೃತ್ವದಲ್ಲಿ ಸಾರ್ವಜನಿಕರು ತಹಶೀಲ್ದಾರ್ ವಿ.ಜಿ. ಲಾಂಜೇಕರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಪೊಲೀಸರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಸಮಾಜದ ರಕ್ಷಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸುವ ಪೊಲೀಸರು ತಮ್ಮ ಬೇಡಿಕೆಗಾಗಿ ಪ್ರತಿಭಟನೆಗೆ ನಿರ್ಧರಿಸಿರುವುದು ವಿಪರ್ಯಾಸ. ರಾಜ್ಯ ಪೊಲೀಸರು ಭತ್ತೆ, ವೇತನ ತಾರತಮ್ಯ, ಸೌಲಭ್ಯಗಳ ಕೊರತೆ ಇನ್ನಿತರ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ಇವರ ರಕ್ಷಣೆಗೆ ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಸಾರ್ವಜನಿಕರು ಈ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದು ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ರಾಘವೇಂದ್ರ ಜಿ.ನಾಯ್ಕ, ವಸಂತ ಖೇಮು ನಾಯ್ಕ, ಗಣಪತಿ ನಾಯಕ ಸೂರ್ವೆ, ಅಮರ ಲಕ್ಷ್ಮೇಶ್ವರ, ಸಚಿನ್ ನಾಯ್ಕ, ವಿನಾಯಕ ನಾಯ್ಕ, ಅಕ್ಷಯ ನಾಯ್ಕ, ವಿಘ್ನೇಶ್ ಹರಿಕಾಂತ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News