ನಿಮಗೂ ಇಸ್ಲಾಮ್, ಮುಸ್ಲಿಮರೆಂದರೆ ಭಯವೇ ? ಹಾಗಾದರೆ ಇಲ್ಲಿದೆ ಅತ್ಯುತ್ತಮ ಮಾತ್ರೆ !
Update: 2016-05-30 22:18 IST
ಇದು "ಇಸ್ಲಾಮೊಫೋಬಿನ್ " ಮಾತ್ರೆ. ಇದನ್ನು ನಿಯಮಿತವಾಗಿ ತೆಗೆದುಕೊಂಡರೆ ಇಸ್ಲಾಂ ಮತ್ತು ಮುಸ್ಲಿಮರ ಕುರಿತ ನಿಮ್ಮ ಎಲ್ಲ ಭಯ ತಕ್ಷಣ ದೂರವಾಗುತ್ತದೆ. ಬೇಕಾದರೆ ಇದನ್ನು ಈಗಾಗಲೇ ತೆಗೆದುಕೊಂಡವರ ಮಾತು ಕೇಳಿ - ಇಂತಹದೊಂದು ಜಾಹೀರಾತು ಬಂದಿದೆ. ಆದರೆ ಅಂತಹ ಮಾತ್ರೆ ಏನೂ ಬಂದಿಲ್ಲ. ಇಸ್ಲಾಂ ಮತ್ತು ಮುಸ್ಲಿಮರ ಬಗ್ಗೆ ಹರಡಲಾಗುತ್ತಿರುವ ಭಯದ ಅಭಿಯಾನದ ವಿರುದ್ಧ ಜಾಗೃತಿ ಮೂಡಿಸಲು ಅಮೇರಿಕನ್ ಇಸ್ಲಾಮಿಕ್ ರಿಲೇಶನ್ಸ್ (CAIR) ಬಿಡುಗಡೆ ಮಾಡಿರುವ ಈ ಅಣಕು ಮಾತ್ರೆ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೀವೂ ನೋಡಿ, ಇತರರಿಗೂ ತೋರಿಸಿ.