ಮಸ್ಕತ್:ಮನೆಕೆಲಸದವರನ್ನು ಕರೆತರಲು ಭಾರತದ ರಾಯಭಾರ ಕಚೇರಿಯ ಎನ್‌ಒಸಿ ಕಡ್ಡಾಯ

Update: 2016-05-31 04:27 GMT

ಮಸ್ಕತ್, ಮೇ 31: ಮನೆಕೆಲಸದವರನ್ನು ಇಲ್ಲಿಗೆ ಇನ್ನು ಮುಂದೆ ಕರೆತರುವುದಿದ್ದರೆ ಭಾರತ ರಾಯಭಾರಿ ಕಚೇರಿಯ ನಿರಕ್ಷೇಪಣಾ ಪತ್ರ ಎನ್‌ಒಸಿ ಕಡ್ಡಾಯವಾಗಿ ಪಡೆಯಬೇಕಾಗಿದೆ. ರಾಯಭಾರಿ ಕಚೇರಿಯ ಕ್ರಮಗಳನ್ನು ಉಲ್ಲಂಘಿಸಿ ಮನೆಕೆಲಸದವರನ್ನು ಕರೆತರುವ ಪ್ರವೃತ್ತಿ ಹೆಚ್ಚಳವಾದ್ದರಿಂದ ನೋಅಬ್ಜೆಕ್ಷನ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದ್ದು. ಎನ್‌ಒಸಿ ಇದ್ದರೆ ಮಾತ್ರ ಎಮಿಗ್ರೆಶನ್ ಇಲಾಖೆ ವೀಸಾ ನೀಡಲಿದೆ. ಮನೆಕೆಲಸದವರಿಗೆ ಸುರಕ್ಷೆ ಒದಗಿಸಲಿಕ್ಕಾಗಿ ಭಾರತೀಯ ರಾಯಭಾರ ಕಚೇರಿ ಈ ತೀರ್ಮಾನ ತಳೆದಿದೆ ಎಂದು ರಾಯಭಾರಿ ಇಂದ್ರಮಣಿ ಪಾಂಡೆ ಹೇಳಿದ್ದಾರೆ.

ಮೂರುವಾರಗಳ ಮೊದಲು ಈ ನಿರ್ಧಾರ ತೆಗೆಯಲಾಗಿದ್ದು ಎಮಿಗ್ರೇಶನ್ ವಿಭಾಗಕ್ಕೆ ತಿಳಿಸಲಾಗಿದೆ. ಈಗ ವಿದೇಶದಲ್ಲಿ ಕೆಲಸಕ್ಕೆ ಜನರನ್ನು ರಿಕ್ರ್ಯೂಟ್ ನಡೆಸುವುದಿದ್ದರೆ ಇ-ಮೈಗ್ರೊ ವ್ಯವಸ್ಥೆಯ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಸುರಕ್ಷಿತ ನೇಮಕಾತಿಗಾಗಿ ಈ ವ್ಯವಸ್ಥೆ ಮಾಡಲಾಗಿದ್ದು ಇದೀಗ ಹೊಸದಾಗಿ ಎನ್‌ಒಸಿ ಕಡ್ಡಾಯವನ್ನು ಸೇರಿಸಲಾಗಿದೆ.

 ಮನೆಕೆಲಸಗಾರರು ಬೇಕಿದ್ದವರು 1100ರಿಯಾಲ್ ಬ್ಯಾಂಕ್ ಗ್ಯಾರಂಟಿ ನೀಡಬೇಕಾಗುತ್ತದೆ ಎಂಬ ಕಾನೂನನ್ನು ಭಾರತೀಯ ರಾಯಭಾರ ಕಚೇರಿ ನಾಲ್ಕುವರ್ಷ ಮೊದಲು ಕಡ್ಡಾಯಗೊಳಿಸಿತ್ತು. ಮನೆಕೆಲಸಗಾರರು ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳನ್ನು ದೂರೀಕರಿಸಲು ಮತ್ತು ಅಗತ್ಯ ಸಂರಕ್ಷಣೆ ಒದಗಿಸಲು ರಾಯಭಾರ ಕಚೇರಿ ಈ ನಿರ್ಧಾರ ತಳೆದಿತ್ತು.

 ಆದರೆ ಮನೆ ಕೆಲಸಗಾರರನ್ನು ಊರಿಂದ ವಿಸಿಟಿಂಗ್ ವೀಸಾದಲ್ಲಿ ಕರೆತರುತ್ತಿರುವ ಅನೇಕ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ರಾಯಭಾರ ಕಚೇರಿ ಎನ್‌ಒಸಿ ಕಡ್ಡಾಯಗೊಳಿಸಿದೆ. ಆದರೆ ಕಾನೂನು ಉಲ್ಲಂಘಿಸಿ ಕೆಲಸಗಾರರನ್ನು ಕರೆತರುವ ಅನೇಕ ಏಜೆನ್ಸಿಗಳಿದ್ದು ಇವರ ಮೂಲಕ ಬಂದು ಏನಾದರೂ ಕಷ್ಟ ಅನುಭವಿಸುತ್ತಿದ್ದರೆ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದರೆ ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News