ಚಿಕ್ಕಮಗಳೂರು: ಜಿಲ್ಲಾಮಟ್ಟದ ದೇಹದಾರ್ಢ್ಯ ಸ್ಪರ್ಧೆ
ಚಿಕ್ಕಮಗಳೂರು, ಮೇ 31: ನಗರದಲ್ಲಿ ಮಾರುತಿ ಮಲ್ಟಿ ಜಿಮ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಾರುತಿ ಮಲ್ಟಿಜಿಮ್‌ನ ಆರ್.ಅಭಿಜಿತ್ ಅವರು ಮಿಸ್ಟರ್ ಚಿಕ್ಕಮಗಳೂರು-2016 ಪ್ರಶಸ್ತಿ ಭಾಜನರಾಗಿದ್ದಾರೆ.
ಜೆವಿಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗದಿಂದ 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು, ಮಾರುತಿ ಮಲ್ಟಿಜಿಮ್‌ನ ಈಶ್ವರ್‌ಶೆಟ್ಟಿ ಬೆಸ್ಟ್ ಫೋಸರ್, ಕಡೂರಿನ ಮಕ್ಸೂದ್‌ಖಾನ್ ಮೋಸ್ಟ್ ಮಸ್ಕ್ಯೂಲರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
50 ರಿಂದ 55 ಕೆಜಿ ವಿಭಾಗದಲ್ಲಿ ಸುಭಾಶ್ ಶೆಟ್ಟಿ ಪ್ರಥಮ, ಯೂಸೂಫ್‌ಖಾನ್ ದ್ವಿತೀಯ, ಗಣೇಶ್ ತೃತೀಯ, 60 ಕೆಜಿ ವಿಭಾಗದಲ್ಲಿ ಮಕ್ಸೂದ್‌ಖಾನ್ ಪ್ರಥಮ, ಪ್ರದೀಪ್ ದ್ವಿತೀಯ, ಪವನ್ ಶೆಟ್ಟಿ ತೃತೀಯ, 65 ಕೆಜಿ ವಿಭಾಗದಲ್ಲಿ ಈಶ್ವರ್‌ಶೆಟ್ಟಿ ಪ್ರಥಮ, ಲಕ್ಷ್ಮಣ್ ದ್ವಿತೀಯ, ಚಿರಂಜೀವಿ ತೃತೀಯ, 70 ಕೆಜಿ ವಿಭಾಗದಲ್ಲಿ ವಿನಯ್ ಪ್ರಥಮ, ಮಿಥುನ್ ದ್ವಿತೀಯ ಸ್ಥಾನ ಹಾಗೂ ಇಮ್ರಾನ್‌ಹುಸೈನ್ ತೃತೀಯ ಸ್ಥಾನ, 75 ಕೆಜಿ ವಿಭಾಗದಲ್ಲಿ ಅಭಿಜಿತ್ ಪ್ರಥಮ, ಪುನೀತ್ ದ್ವಿತೀಯ, ಸಾಧಿಕ್ ತೃತೀಯ, 80 ಕೆಜಿ ವಿಭಾಗದಲ್ಲಿ ಸಂಜಯ ಪ್ರಥಮ, ಸೂರ್ಯ ದ್ವಿತೀಯ, ರಾಜು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ, ಒಂದೇ ದಿನದಲ್ಲಿ ಮಿಸ್ಟರ್ ಚಿಕ್ಕಮಗಳೂರು ಆಗಲು ಯಾರಿಂದಿಲೂ ಸಾಧ್ಯವಿಲ್ಲ. ನಿರಂತರ ಪರಿಶ್ರಮ ಹಾಗೂ ಪ್ರಯತ್ನದಿಂದ ಮಾತ್ರ ಗೆಲುವು ಸಾಧ್ಯ ಎಂದ ಅವರು, ಅವಕಾಶಗಳು ಒಂದು ದಿನಕ್ಕೆ ಮುಗಿಯುವುದಿಲ್ಲ. ಹಾಗಾಗಿ ಭವಿಷ್ಯದಲ್ಲಿ ಇಲ್ಲಿ ಭಾಗವಹಿಸಿದ ಸ್ಪರ್ಧಿಗಳು ಸತತ ಪರಿಶ್ರಮ ಹಾಕಿ ಮುಂದೆ ಪ್ರಶಿಸ್ತಿಯನ್ನು ಗಳಿಸುವಂತಾಗಲಿ ಎಂದರು.
ಪ್ರಶಸ್ತಿ ವಿಜೇತ ವಸಂತ್‌ರವರನ್ನು ಅಂತಾರಾಷ್ಟ್ರೀಯ ದೇಹದಾರ್ಢ್ಯ ಕ್ರೀಡಾಪಟು ಅರುಣ್‌ಕುಮಾರ್ ಹಾಗೂ ಭಾರತ್ ಕಿಶೋರ್ ಸನ್ಮಾನಿಸಿದರು. ಜೆಡಿಎಸ್ ಮುಖಂಡ ಐ.ಡಿ.ಚಂದ್ರಶೇಖರ್, ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ ಪ್ರಸಾದ್ ಅಮೀನ್, ಜಿಮ್ ವ್ಯವಸ್ಥಾಪಕ ಸಂದೀಪ್, ತರಬೇತುದಾರ ರಾಬರ್ಟ್, ಬ್ರಿಟ್ ನ್ಯೂಟ್ರೇಶನ್ ಮಾಲಕ ದೀಪಕ್, ತೀರ್ಪುಗಾರರಾದ ಗಂಗಾಧರ್, ದಿಲೀಪ್, ಕಿಶೋರ್, ಎನ್.ಪ್ರವೀಣ್, ಪಿ.ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.