×
Ad

ಬಾಲಕ ಜೀವನ್ ಕಾಯಿಲೆಗೆ ಸ್ಪಂದಿಸಲು ಕೋರಿಕೆ

Update: 2016-05-31 22:16 IST

ಮೂಡಿಗೆರೆ, ಮೇ 31: ಹೆಸ್ಗಲ್‌ನ ಬಾಪೂನಗರದ ಸುಮಾರು 8ವರ್ಷದ ಜೀವನ್ ಎಂಬ ಬಾಲಕ ಕಳೆದ 7ವರ್ಷಗಳಿಂದ ಬಿಳಿ ರಕ್ತ ಕಣಗಳ ಕೊರತೆಯಿಂದ ಬಳಲುತ್ತಿದ್ದು, ಹಲವು ಆಸ್ಪತ್ರೆಗಳಲ್ಲಿ ಸುಮಾರು 3ಲಕ್ಷಕ್ಕೂ ಹೆಚ್ಚು ಹಣ ಚಿಕಿತ್ಸೆಗಾಗಿ ವೆಚ್ಚ ತಗುಲಿದೆ. ಬಾಲಕನ ತಂದೆ ನಾಗಪ್ಪ ಕೂಲಿ ಕಾರ್ಮಿಕರಾಗಿದ್ದು, ಆರ್ಥಿಕವಾಗಿ ಬಹಳ ನಿರ್ಗತಿಕರಾಗಿದ್ದಾರೆ. ಮಕ್ಕಳಲ್ಲೆ ಅತೀ ಅಪರೂಪವಾದ ಈ ಕಾಯಿಲೆ ಗುಣ ಪಡಿಸಲು ವಾರಕ್ಕೆ ಕನಿಷ್ಠ 4,000 ರೂ. ಅವಶ್ಯಕತೆ ಇದ್ದು, ಪ್ರಸ್ತುತ ಈ ಬಾಲಕ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹೆಚ್ಚಿನ ಚಿಕಿತ್ಸೆ ಮತ್ತು ಔಷಧೊಪಚಾರಕ್ಕಾಗಿ ಮಗನ ಕಾಯಿಲೆ ಗುಣ ಪಡಿಸುವ ದೃಷ್ಠಿಯಿಂದ ದಾನಿಗಳಲ್ಲಿ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದೆ. ಸಹಾಯ ಮಾಡಲಿಚ್ಛಿಸುವ ದಾನಿಗಳು ಜೀವನ್, ವಿಜಯ ಬ್ಯಾಂಕ್ ಶಾಖೆ, ಮೂಡಿಗೆರೆ, ಖಾತೆ ಸಂಖ್ಯೆ 11510111002039 ಇದಕ್ಕೆ ಜಮೆ ಮಾಡಬಹುದಾಗಿದೆ. ಅಥವಾ ಮೊ.ಸಂ. 9902425720ರನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News