×
Ad

ಅಕ್ರಮ ಕಟ್ಟಿಗೆ ಜಪ್ತಿ

Update: 2016-06-01 22:07 IST

ಯಲ್ಲಾಪುರ, ಜೂ.1: ತಾಲೂಕಿನ ಯಲ್ಲಾಪುರದ ಇಂಡಸ್ಟ್ರೀಸ್ ಏರಿಯಾದಲ್ಲಿರುವ ಕರುಣಾ ಸಂಸ್ಥೆಯ ಸಾಮಾನ್ಯ ಸೌಲಭ್ಯ ಘಟಕದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಕಟ್ಟಿಗೆಗಳನ್ನು ಬುಧವಾರ ಜಪ್ತಿ ಮಾಡಿಕೊಂಡಿದ್ದಾರೆ.

ವಿಲಿಯಂ(37)ಎಂಬವರು ಈ ಇಂಡಸ್ಟ್ರೀಯನ್ನು ನಡೆಸುತ್ತಿದ್ದು, ಆತನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿಯ ವೇಳೆಯಲ್ಲಿ 25 ಸಿಎಫ್‌ಟಿ ಅಕ್ರಮ ಕಟ್ಟಿಗೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಎಸಿಎಫ್ ಎಸ್.ಡಿ. ಮರಿಗೋಳೊಪ್ಪನವರ್ ನೇತ್ವದಲ್ಲಿ ದಾಳಿ ನಡೆಸಲಾಗಿತ್ತು. ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News