5 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿ ಅಭಿವೃದ್ಧಿ: ಚಂದ್ರೇಗೌಡ
ಚಿಕ್ಕಮಗಳೂರು, ಜೂ.1: 5 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿ ಆವರಣದ ರಸ್ತೆ ಕಾಂಕ್ರಿಟೀಕರಣ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅಧ್ಯಕ್ಷ ಎಸ್.ಟಿ.ಚಂದ್ರೇಗೌಡ ತಿಳಿಸಿದ್ದಾರೆ.
ಅವರು ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಮಾತನಾಡಿ, ತಮಗೆ ಸಿಕ್ಕ ಕಳೆದ ಹತ್ತು ತಿಂಗಳ ಅಲ್ಪಾವಧಿಯಲ್ಲಿ ನಬಾರ್ಡ್ ಯೋಜನೆಯಲ್ಲಿ 2.40ಕೋಟಿ ರೂ ವೆಚ್ಚದಲ್ಲಿ ಮಾರುಕಟ್ಟೆ ಪ್ರಾಂಗಣದ ಎಲ್ಲ ರಸ್ತೆಗಳನ್ನು ಕಾಂಕ್ರಿಟೀಕರಣ ಮಾಡಿ ಅಭಿವೃದ್ಧಿ ಪಡಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಪಡಿಸಲಾಗಿದೆ. 1ಕೋಟಿ ರೂ. ವೆಚ್ಚದಲ್ಲಿ ಆರ್‌ಕೆವೈ ಯೋಜನೆಯಲ್ಲಿ ಗೋದಾಮು ನಿರ್ಮಾಣ, 64ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನಲ್ಲಿ ರೈತರ ಜಮೀನಿಗೆ ಸಾಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
54 ಲಕ್ಷ ರೂ. ನಲ್ಲಿ ಪ್ರಾಂಗಣದಲ್ಲಿ ಕಾಂಪೌಂಡ್ ನಿರ್ಮಾಣ, ಎರಡು ಸಂತೆ ಕಟ್ಟೆ ಅಭಿವೃದ್ಧಿ, 2ಜೀಪ್ ಶೆಡ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. 3.5ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ಬಳಕೆದಾರರ ಶುಲ್ಕವನ್ನು ವರ್ಷಕ್ಕೆ 30ಲಕ್ಷ ರೂ. ಸಂಗ್ರಹಿಸಲು ಸರಕಾರ ಗುರಿ ನಿಗದಿ ಪಡಿಸಿತ್ತು. ಆದರೆ ನಮ್ಮ ಸಂಸ್ಥೆ ವರ್ಷಕ್ಕೆ 60ಲಕ್ಷ ರೂ. ಆದಾಯ ತರುವಲ್ಲಿ ಯಶಸ್ವಿಯಾದ ಕಾರಣ ಸರಕಾರ ಮುಂದಿನ ವರ್ಷಗಳಲ್ಲಿ 73ಲಕ್ಷ ರೂ. ಟಾರ್ಗೆಟ್ ನೀಡಿ ಆದೇಶಿಸಿದೆ ಎಂದರು.
ರೈತರು ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ತಂದ ಸಂದರ್ಭದಲ್ಲಿ ಯಾವುದೆ ರೀತಿ ತೊಂದರೆಯಾಗದಂತೆ ಸಹಕರಿಸಲು ಈ ಕಾರ್ಯಕ್ಕೆ ಮುಂದಾಗಿದ್ದು, ಮಾರಾಟದಲ್ಲೂ ರೈತರಿಗೆ ಅನ್ಯಾಯವಾಗದಂತೆ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಅಳವಡಿಸಲಾಗಿದೆ. ಇಂದಿಗೆ ಎಪಿಎಂಸಿ ಆಡಳಿತ ಮಂಡಳಿ ಅವಧಿ ಪೂರ್ಣಗೊಂಡಿದ್ದು, ತಮಗೆ ಸಹಕರಿಸಿದ ರೈತರಿಗೆ, ವರ್ತಕರಿಗೆ ಹಾಗೂ ಅಧಿಕಾರಿ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಬಡತನ ನಿವಾರಣೆಗೆ ಶಿಕ್ಷಣ ಪ್ರಮುಖ ಅಸ್ತ್ರ: