×
Ad

ವಿಧಾನ ಸೌಧಕ್ಕೂ ತಟ್ಟಿದ ರಾಜ್ಯ ಸರಕಾರಿ ನೌಕರರ ಮುಷ್ಕರದ ಬಿಸಿ

Update: 2016-06-02 11:35 IST

ಬೆಂಗಳೂರು, ಜೂ.2: ವೇತನ ತಾರತಮ್ಯವನ್ನು ನಿವಾರಿಸುವಂತೆ ಒತ್ತಾಯಿಸಿ ಗುರುವಾರ ರಾಜ್ಯಾದ್ಯಂತ ರಾಜ್ಯಸರಕಾರಿ  ನೌಕರರು ಮುಷ್ಕರದ ಹಾದಿ ಹಿಡಿದಿದ್ದಾರೆ. ರಾಜ್ಯ ಸರಕಾರಿ ನೌಕರರ ಮುಷ್ಕರದ ಬಿಸಿ ವಿಧಾನ ಸೌಧಕ್ಕೂ ತಟ್ಟಿದೆ.
*ನೌಕರರ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಬಿಕೋ ಎನ್ನುತ್ತಿದೆ. ಶಕ್ತಿ ಸೌಧ ನೌಕರರು ಇಲ್ಲದೆ ಖಾಲಿಯಾಗಿದೆ.
*ವಿಧಾನ ಸೌಧದಲ್ಲಿ ವಿಧಾನಸಭೆ ಕಾರ್ಯದರ್ಶಿ ಎಸ್‌.ಮೂರ್ತಿ  ಕೆಲಸಕ್ಕೆ ಹಾಜರಾಗಿದ್ದಾರೆ. ರಾಜ್ಯಸಭಾ ಮತ್ತು ವಿಧಾನ ಪರಿಷತ್‌ ಚುನಾವಣೆಯ ಹಿನ್ನೆಲೆಯಲ್ಲಿ ಎಸ್.ಮೂರ್ತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
*ಬಿಬಿಎಂಪಿ  ಕಚೇರಿ ನೌಕರರು ಇಲ್ಲದೆ ಭಣಗುಟ್ಟುತ್ತಿದೆ. ಆಯುಕ್ತರು ಕಚೇರಿಗೆ ಆಗಮಿಸಿಲ್ಲ. ಮುಷ್ಕರದ ಕಾರಣದಿಂದಾಗಿ ನಗರದಲ್ಲಿ ವಿಲೇವಾರಿಯಾಗದ ಕಸ.
*ಕೊಪ್ಪಳ ಡಿಸಿ ಕಚೇರಿ ಮುಂದೆ ನೌಕರರು  ಧರಣಿ ನಡೆಸುತ್ತಿದ್ದಾರೆ.
*ಉತ್ತರ ಕ್ನಡ ಜಿಲ್ಲೆಯಲ್ಲೂ ನೌಕರರು  ಗೈರು ಹಾಜರಾಗಿದ್ದಾರೆ. 
*ಚಿತ್ರದುರ್ಗ  ಜಿಲ್ಲಾಧಿಕಾರಿ ಕಚೇರಿಗೆ ಬೀಗ, ಬೀಗ ತೆಗೆಯದ ಹಿನ್ನೆಲೆಯಲ್ಲಿ ಹೊರಗೆ ನಿಂತ ಜಿಲ್ಲಾಧಿಕಾರಿ  , ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಆಹಾರ ಇಲಾಖೆಯ ನಿರ್ದೇಶಕ
*ಹಾಸನದಲ್ಲಿ ನಗರ ಸಭೆ ನೌಕರರು ಇಲ್ಲದೆ ಕಚೇರಿ ಖಾಲಿ ಖಾಲಿಯಾಗಿದೆ.
*ಕೋಲಾರದಲ್ಲಿ  ಸರಕಾರಿ ಕಚೇರಿ ಬಂದ್‌ ಆಗಿದೆ.
*ರಾಜ್ಯಾದ್ಯಂತ 6 ಲಕ್ಷ 40 ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News