ಸಿಎಂ ಕಾರಿನ ಮೇಲೆ ಕಾಗೆ ಮರಿಯ ಧರಣಿ..!
Update: 2016-06-02 12:13 IST
ಬೆಂಗಳೂರು,ಜೂ.2: ಸರಕಾರಿ ನೌಕರರು ವೇತನ ತಾರತಮ್ಯವನ್ನು ನಿವಾರಿಸುವಂತೆ ಒತ್ತಾಯಿಸಿ ಗುರುವಾರ ಬೆಳಗ್ಗೆ ರಾಜ್ಯಾದ್ಯಂತ ಕಚೇರಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಾರ‍್ ಮೇಲೆ ಕಾಗೆ ಮರಿಯೊಂದು ಕೂತು ಧರಣಿ ನಡೆಸಿದ ಘಟನೆ ಸುದ್ದಿಗೊಂದು ಗುದ್ದು ನೀಡಿದೆ.
ಗೃಹಕಚೇರಿ ಕೃಷ್ಣಾದ ಬಳಿ ಮುಖ್ಯ ಮಂತ್ರಿ ಕಾರಿನ ಮೇಲೆ ಕಾಗೆ ಮರಿ ಏರಿ ಕುಳಿತು ಕಾರ‍್ ನ ಓಡಾಟಕ್ಕೆ ಅಡ್ಡಿಪಡಿಸಿತು ಎನ್ನಲಾಗಿದೆ. ಕಾರನ್ನು ಹಿಂದಕ್ಕೂ ಮುಂದಕ್ಕೂ ಚಲಾಯಿಸದರೂ ಕಾಗೆ ವಾಹನ ಮೇಲಿನಿಂದ ಇಳಿಯಲಿಲ್ಲ. ಸುಮಾರು ಹತ್ತು ನಿಮಿಷಗಳ ಕಾರ್‌ನ ಮೇಲಿನಿಂದ ಕಾಗೆಯನ್ನು ಓಡಿಸುವ ಪ್ರಯತ್ನ ನಡೆಯಿತು. ಕಾಗೆ ಕಾರ‍್ ನ ಮೇಲಿನಿಂದ ಇಳಿಯದೆ ಇದ್ದಾಗ ಸಿಬ್ಬಂದಿಯೊಬ್ಬರು ಕಾಗೆಯನ್ನು ಕೈಯಲ್ಲಿ ಹಿಡಿದು ದೂರಕ್ಕೆ ಅಟ್ಟಿದ್ದರು.