×
Ad

ಕಾರವಾರ: ಜು.31ರ ವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ

Update: 2016-06-02 22:35 IST

ಕಾರವಾರ, ಜೂ.2: ಜಿಲ್ಲೆಯಲ್ಲಿ ಜೂನ್1 ರಿಂದ ಜುಲೈ 31ರ ವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ಸರಕಾರ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಮೀನುಗಾರರು ತಮ್ಮ ಬೋಟು, ಬಲೆ, ಸರಂಜಾಮುಗಳನ್ನು ತೊಳೆದು ಸುರಕ್ಷಿತವಾಗಿಡುವ ದೃಶ್ಯ ಬೈತ ಖೋಲ್ ಬಂದರಿನಲ್ಲಿ ಕಂಡುಬಂತು.

  ಮೀನುಗಾರಿಕೆ ನಿಷೇಧಿತ ಅವಧಿ ಯಲ್ಲಿ ಎರಡು ತಿಂಗಳುಗಳ ಕಾಲ ಬೆಲೆ ಬಾಳು ವ ಬೋಟು, ಬಲೆಗಳನ್ನು ಸುರಕ್ಷಿತವಾಗಿ ಇಡುವ ಕಾಯಕದಲ್ಲಿ ಮಾಲಕರು ತೊಡಗಿದ್ದಾರೆ. ಬಲೆಗೆ ಮೀನಿನ ವಾಸನೆಯಿಂದ ಇಲಿ, ಗೆದ್ದಲುಗಳಿಗೆ ತುತ್ತಾಗದಂತೆ ಸಂರಕ್ಷಿಸಿಡಲಾಗುತ್ತದೆ. ಇದಕ್ಕಾಗಿ ಸಮೀಪದ ಗ್ರಾಮೀಣ ಪ್ರದೇಶಗಳಾದ ವಾಸಗಂಬಿ, ಜಾಂಬಾ, ಬಾಳ್ನಿ ಮುಂತಾದ ಸಿಹಿ ನೀರಿನ ಝರಿ ಇರುವೆಡೆಗೆ ಬಲೆ ಒಯ್ದು ತೊಳೆಯಲಾಗುತ್ತದೆ. ಇದಕ್ಕಾಗಿ ನೂರಾರು ಕಾಮಿ  

ಕರ್ರು ಬಲೆಯನ್ನು ಲಾರಿ ಮೇಲೆ ತುಂಬುತ್ತಿದ್ದಾರೆ. ಬಲೆ ತೊಳೆದು ಬಿಸಿಲಿನಲ್ಲಿ ಒಣಗಿಸಿದ ನಂತರ ಮುಂದಿನ ಎರಡು ತಿಂಗಳುಗಳ ಕಾಲ ಹಾಳಾದ ಬಲೆಗಳನ್ನು ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಮಳೆಗಾಲದ ಆರಂಭದಲ್ಲಿ ಬೃಹತ್ ಅಲೆಗಳು, ತುಫಾನ್‌ಗಳ ಹಾವಳಿ ಸಮುದ್ರದಲ್ಲಿ ಹೆಚ್ಚಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಮೀನುಗಾರರ ರಕ್ಷಣೆಯ ಉದ್ದೇಶ ದಿಂದ ಹಾಗೂ ಮಳೆಗಾಲದ ಸಮಯದಲ್ಲಿ ಮೀನುಗಳು ಮೊಟ್ಟೆ ಇಡುವ ಸಮಯವಾಗಿರುವುದರಿಂದ ಮತ್ಸ್ಯ ಸಂತತಿಗಳ ವೃದ್ಧಿಗೆ ಸರಕಾರ ಈ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದೆ. ಅವಧಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ ದೋಣಿಗಳ ಚಲನವಲನಗಳಿಗಾಗಿ 10 ಅಶ್ವಶಕ್ತಿ ಸಾಮರ್ಥ್ಯದ ಯಾಂತ್ರಿಕ ಹಾಗೂ ಸಾಂಪ್ರದಾಯಿಕ ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಮೀನುಗಾರಿಕೆ ಋತು ಆರಂಭವಾಗುವ ಪೂರ್ವದಲ್ಲಿ ಹಾವೇರಿ, ಗದಗ, ಕೊಪ್ಪಳ, ಕಲಘಟಗಿ, ಹುಬ್ಬಳ್ಳಿ, ವಿಜಯಪುರ ಮುಂತಾದೆಡೆಗಳಿಂದ ಮಹಿಳಾ ಕಾರ್ಮಿಕರು ಜಿಲ್ಲೆಯ ಮೀನುಗಾರಿಕಾ ಬಂದರುಗಳಲ್ಲಿ ದುಡಿಯಲು ಬರುತ್ತಾರೆ. ಸರಕಾರದ ಈ ಅಧಿಸೂಚನೆ ಉಲ್ಲಂಘಿಸುವ ಮೀನು ಗಾರರ ವಿರುದ್ಧ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಒಂದು ವರ್ಷದ ಅವಧಿ ಯವರೆಗೆ ರಾಜ್ಯ ಮಾರಾಟ ಕರ ರಹಿತ ಡೀಸೆಲ್ ಪಡೆ ಯಲು ಮತ್ತು ಕೇಂದ್ರ ಅಬಕಾರಿ ತೆರಿಗೆ ಮರುಪಾವತಿ ಪಡೆ ಯಲು ಅನರ್ಹರಾಗಿರುತ್ತಾರೆ.

<

    ಎಂ.ಎಲ್. ದೊಡ್ಡಮನಿ ಇಲಾಖೆಯ ಉಪನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News