ನ್ಯಾಯಾಲಯದಲ್ಲಿ ಅಪರಾಧಿಯ ಮೇಲೆರಗಿದ ಕೊಲೆಯಾದ ಮಹಿಳೆಯ ತಂದೆ
Update: 2016-06-03 18:55 IST
ಅಮೇರಿಕದ ಕ್ಲೀವ್ ಲ್ಯಾಂಡ್ ನ ನ್ಯಾಯಾಲಯವೊಂದರಲ್ಲಿ ತನ್ನ ಮಗಳ ಕೊಲೆ ಮಾಡಿದ ಅಪರಾಧಿಯ ಮೇಲೆ ಹಾರಿ ಹಲ್ಲೆ ಮಾಡಲು ತಂದೆ ವಿಫಲ ಯತ್ನ ನಡೆಸಿದ ಘಟನೆ ವರದಿಯಾಗಿದೆ. ತನ್ನ ಮಗಳ ಸಹಿತ ಮೂವರನ್ನು ಲೈಂಗಿಕ ಕಿರುಕುಳ ನೀಡಿ, ಕೊಲೆ ಮಾಡಿ ಅವರ ಮೃತ ದೇಹಗಳನ್ನು ಕಸ ತುಂಬುವ ಬ್ಯಾಗ್ ಗೆ ತುಂಬಿಟ್ಟ ಅಪರಾಧಕ್ಕಾಗಿ ಮ್ಯಾಡಿಸನ್ ಎಂಬಾತನ ಮೇಲೆ ಕೊಲೆಯಾದ ಒರ್ವಳ ತಂದೆ ವ್ಯಾನ್ ಟೆರಿ ಹಾರಿ ಆತನಿಗೆ ಹಲ್ಲೆ ನಡೆಸಲು ಯತ್ನಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಆದರೆ ಅಲ್ಲಿದ್ದ ಪೊಲೀಸರು ಟೆರಿಯನ್ನು ತಡೆದರು.
Courtesy : www.khaleejtimes.com