ಕುಂದಾಪುರ: ಕ್ಯಾಂಡಲ್ ಮತ್ತು ಫಿನಾಯಿಲ್ ತಯಾರಿಕಾ ತರಬೇತಿ ಪ್ರಾತ್ಯಕ್ಷಿಕೆ
Update: 2016-06-03 22:08 IST
ಭಟ್ಕಳ, ಜೂ.3: ಭಾರತ ಸರಕಾರ ಪಾಲಿಟೆಕ್ನಿಕ್ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ ಇವರ ವತಿಯಿಂದ ಕುಂದಾಪುರದ ಕಾರ್ವಿಕೇರಿಯಲ್ಲಿ ಬಡ ಮಹಿಳೆಯರಿಗೆ ಕ್ಯಾಂಡಲ್ ಮತ್ತು ಫಿನಾಯಿಲ್ ತಯಾರಿಕಾ ತರಬೇತಿಯ ಪ್ರಾತ್ಯಕ್ಷಿಕೆಯನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಾಗಾರದಲ್ಲಿ ಮುರ್ಡೇಶ್ವರ ಪಾಲಿಟೇಕ್ನಿಕ್ ಉಪಪ್ರಾಚಾರ್ಯ ಹಾಗೂ ಸಂಯೋಜಾಧಿಕಾರಿ ಕೆ.ಮರಿಸ್ವಾಮಿ ಉಪಸ್ಥಿತರಿದ್ದು, ತರಬೇತಿಯ ಲಾಭ ಪಡೆದು ಕ್ಯಾಂಡಲ್ ಮತ್ತು ಫಿನಾಯಿಲ್ ತಯಾರಿಕಾ ಉದ್ಯಮವನ್ನು ಈ ಭಾಗದಲ್ಲಿ ಹಮ್ಮಿಕೊಂಡು ಆರ್ಥಿಕವಾಗಿ ಮಹಿಳೆಯರು ಸಬಲರಾಗಿ ಇದಕ್ಕೆ ಬೇಕಾದ ನೆರವನ್ನು ಒದಗಿಸಿ ಕೊಡಬೇಕಾಗಿ ತಿಳಿಸಿದರು.