×
Ad

ಬೇಸಿಗೆ ಶಿಬಿರದ ಸಮಾರೋಪ

Update: 2016-06-03 22:14 IST

ಅಂಕೋಲಾ, ಜೂ.3: ಬೇಸಿಗೆ ರಜಾ ಶಿಬಿರದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಾಂತಿ ನಿಕೇತನ ಪ್ಲೇ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವ್ಕರ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಶಾಂತಿನಿಕೇತನ ಬೇಸಿಗೆ ರಜಾ ಶಿಬಿರದ 2ನೆ ಬ್ಯಾಚ್‌ನ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ತಾಪಂ ಸದಸ್ಯ ಜಗದೀಶ ನಾಯಕ ಮಾತನಾಡಿ, ಬೇಸಿಗೆ ರಜಾ ಶಿಬಿರಗಳು ಮಕ್ಕಳಿಗೆ ಜೀವನದಲ್ಲಿ ಹೊಸತನ್ನು ಕಲಿಸಿಕೊಡುತ್ತವೆ. ಇದನ್ನು ಮಕ್ಕಳ ಪಾಲಕರು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಪಿಐ ಅರುಣಕುಮಾರ ಜಿ. ಕೋಳೂರ ಮಾತನಾಡಿ, ಶಿಬಿರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ಶ್ಲಾಘನೀಯ ಮತ್ತು ಮಾದರಿಯಾಗಿ ಹೊರಹೊಮ್ಮಲಿದೆ ಎಂದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡುವ ಮೂಲಕ ಶಾಂತಿನಿಕೇತನ ಟ್ರಸ್ಟ್ ವತಿಯಿಂದ ತಾಪಂ ನೂತನ ಅಧ್ಯಕ್ಷೆ ಸುಜಾತಾ ಗಾಂವ್ಕರ, ಜಿಪಂ ಸದಸ್ಯ ಜಗದೀಶ ಜಿ. ನಾಯಕ ಮೊಗಟಾ, ಪಿಐ ಅರುಣ್ ಕುಮಾರ ಕೋಳೂರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಟಿ.ಬಿ.ನಾಯಕ, ಕಾರ್ಯದರ್ಶಿ ಶಾಂತಿ ನಾಯಕ, ದಂತ ವೈದ್ಯ ಡಾ. ಸಂಜು ನಾಯಕ, ಮಹೇಶ್ ಜಟಕನಮನೆ, ಸರೋಜಾ ನಾಯಕ, ಶಿಕ್ಷಕಿಯರಾದ ಸುಭಾಂಗಿ, ಮಮತಾ, ಶೀತಲಾ ನಾಯ್ಕ, ಕವಿತಾ, ಮಂಜು, ಪ್ರವೀಣ ನಾಯ್ಕ, ಬೇಬಿ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News