×
Ad

ಭಟ್ಕಳ: 3 ತಿಂಗಳ ಉಚಿತ ಯೋಗ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ

Update: 2016-06-03 23:26 IST

ಭಟ್ಕಳ, ಜೂ.3: ಭಾರತ ಸರಕಾರದ ಪಾಲಿಟೆಕ್ನಿಕ್ ಮೂಲಕ ಸಮುದಾಯ ಅಭಿವೃದ್ದಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ ಇವರ ವತಿಯಿಂದ ಅಮಿತಾಕ್ಷ ಯೋಗ ಕೇಂದ್ರ ಅಮಿತಾ ಆಸ್ಪತ್ರೆ ಭಟ್ಕಳ ಇಲ್ಲಿ ಪ್ರಾರಂಭವಾಗುವ 3 ತಿಂಗಳ ಉಚಿತ ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಯೋಗ ಮನುಷ್ಯನ ದೈಹಿಕ, ಮಾನಸಿಕ ಸಮಸ್ಯೆಗಳ ನಿವಾರಣೆಗೆ ಒಂದು ಉತ್ತಮ ಸಾಧನೆಯಾಗಿದೆ, ಮನಸ್ಸು ಮತ್ತು ಶರೀರ, ಬುದ್ಧಿ ಮತ್ತು ಭಾವನೆ , ಜೀವಾತ್ಮ ಮತ್ತು ಪರಮಾತ್ಮವನ್ನು ಜೋಡಿಸುವುದೇ ಯೋಗ ಜೀವನ. ಇದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ವೃದ್ದಿಸಿ ಸಮಗ್ರ ಬೆಳವಣಿಗೆ ಆಗುತ್ತದೆ. ಯೋಗ ತರಬೇತಿ ಪಡೆಯಲುಯಾವುದೇ ವಿದ್ಯಾರ್ಹತೆ, ವಯಸ್ಸಿನ ನಿರ್ಬಂಧವಿಲ್ಲದೆ ಪ್ರವೇಶ ನೀಡಲಾಗುವುದು.

ತರಬೇತಿ ಪಡೆಯಲು ಇಚ್ಛಿಸುವವರುಅರ್ಜಿ ಪಾರ್ಮಗಳನ್ನು ಮುರ್ಡೇಶ್ವರ ಸಮುದಾಯ ಅಭಿವೃದ್ದಿ ಯೋಜನೆ ಕಚೇರಿ, ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ, ಅಮಿತಾಕ್ಷ ಯೋಗಕೇಂದ್ರ ಅಮಿತ ಆಸ್ಪತ್ರೆ ಟ್ಕಳ, ಹರೀಶ ಶಾಹಿ ಆಫ್ಟಿಕಲ್ಸ್ ಭಟ್ಕಳ, ದಾಮೋದರ ಮೆಡಿಕಲ್ಸ್ ಶಾಪ್ ಮುಂಡಳ್ಳಿ ರಸ್ತೆ ಭಟ್ಕಳದಿಂದ ಅರ್ಜಿ ಫಾರ್ಮ್‌ಗಳನ್ನು ಪಡೆದು ಜೂ.15 ರೊಳಗೆ ಸಲ್ಲಿಸಲು ತಿಳಿಸಲಾಗಿದೆ. ಜೂ.18 ರಿಂದ ತರಬೇತಿಗಳು ಪ್ರಾರಂಭವಾಗುತ್ತದೆ.

ಯಶಸ್ವಿಯಾಗಿ ತರಬೇತಿ ಮುಗಿಸಿದವರಿಗೆ ಕೇಂದ್ರ ಸರಕಾರದ ಪ್ರಮಾಣ ಪತ್ರ ನೀಡಲಾಗುವುದು, ಹೆಚ್ಚಿನ ಮಾಹಿತಿಗಾಗಿಯೋಜನೆಯ ಸಂಯೋಜನಾಧಿಕಾರಿ, ಉಪಪ್ರಾಚಾರ್ಯ ಕೆ.ಮರಿಸ್ವಾಮಿ (9448235284) ಹಾಗೂ ಡಾ.ಪಾಂಡುರಂಗ ನಾಯಕ ಅಧ್ಯಕ್ಷರು, ಅಮಿತಾಕ್ಷ ಯೋೀಗ ಕೇಂದ್ರ ಇವರನ್ನು ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News