ಕುಂಟವಾಣ: ಹೊಲಿಗೆ ಯಂತ್ರಗಳ ಪ್ರಾತ್ಯಕ್ಷಿಕೆ ಮತ್ತು ರಿಪೇರಿ ತರಬೇತಿ
Update: 2016-06-03 23:30 IST
ಭಟ್ಕಳ, ಜೂ.3: ಭಾರತ ಸರಕಾರದ ಪಾಲಿಟೆಕ್ನಿಕ್ ಮೂಲಕ ಸಮುದಾಯ ಅಭಿವೃದಿ ್ಧಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೆಶ್ವರ ಇವರ ವತಿಯಿಂದ ಕುಂಟವಾಣಿಯಲ್ಲಿ ನಡೆದ 6 ತಿಂಗಳ ಉಚಿತ ಹೊಲಿಗೆ ತರಬೇತಿ ಪಡೆದ 35 ಮಹಿಳೆಯರಿಗೆ ಒಂದು ದಿನದ ಹೊಲಿಗೆ ಯಂತ್ರಗಳ ರಿಪೇರಿ ತರಬೇತಿ ಹಾಗೂ ನವೀನ ಮಾದರಿಯ ಹೊಲಿಗೆ ಯಂತ್ರಗಳ ಪ್ರಾತ್ಯಕ್ಷಿಕೆ ಶಿಬಿರವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.
ರೋಶನಿ ಎಂಟರ್ ಪ್ರೈಸಸ್ ಭಟ್ಕಳ ವತಿಯಿಂದ ಪ್ರಾತ್ಯಕ್ಷಿಕೆ ನಡೆಯಿತು. ರಿಪೇರಿ ಬಗ್ಗೆ ನಾಗರಾಜಗೊಂಡ ಮಾಹಿತಿ ನೀಡಿದರು.
ಈ ಶಿಬಿರದಲ್ಲಿ ಉಪಪ್ರಾಚಾರ್ಯ ಹಾಗೂ ಸಂಯೋಜನಾಧಿಕಾರಿ ಕೆ.ಮರಿಸ್ವಾಮಿ ಉಪಸ್ಥಿತರಿದ್ದರು.