×
Ad

ಮಹಾರಾಜ ಪಾರ್ಕಿನಲ್ಲಿ ವ್ಯಕ್ತಿ ಓರ್ವನ ಅನುಮಾನಸ್ಪದ ಸಾವು

Update: 2016-06-04 16:32 IST

ಹಾಸನ: ನಗರದ ಮಹಾರಾಜ ಪಾರ್ಕಿನಲ್ಲಿ ವ್ಯಕ್ತಿ ಓರ್ವನ ಅನುಮಾನಸ್ಪದ ಸಾವು ಸಂಭವಿಸಿದೆ.

      ತಾಲ್ಲೂಕಿನ ಕಂದಲಿ ಸಮೀಪ ಮೇದರಹಳ್ಳಿ ಗ್ರಾಮದ ವೆಂಕಟೇಗೌಡ (ವೆಂಕಟೇಶ್)(55) ಎಂಬುವರೇ ಸಾವನಪ್ಪಪಿರುವ ದುರ್ದೇವಿ. ಉದ್ಯಾನವನದ ಒಳಗೆ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಎದುರು ಮರಹೊಂದರಲ್ಲಿ ದಾರದಿಂದ ಕುತ್ತಿಗೆಗೆ ಬಿಗಿದ ರೀತಿ ಆತ ನೆಲಕ್ಕೆ ಮಂಡಿ ಹೂರಿದ್ದಾನೆ. ರಾತ್ರಿ ಇಲ್ಲವೇ ಬೆಳಗಿನ ಜಾವದಲ್ಲಿ ಈ ಕೃತ್ಯ ನಡೆದಿರಬಹುದು. ಹಗ್ಗದಲ್ಲಿ ಕುತ್ತಿಗೆಗೆ ಬಿಗಿದ್ದಿದ್ದರೂ ಆತನ ಎರಡು ಕಾಲಿನ ಮಂಡಿ ಮಡಿಚಿದಂತೆ ನೆಲಕ್ಕೆ ಊರಿತ್ತು. ಚಪ್ಪಲಿ ಕೂಡ ಪಕ್ಕದಲ್ಲಿ ಯಾರೋ ಇಟ್ಟಿದಂತೆ ಇದೆ. ಆಕಾಶ್ ನೀಲಿ ಪಟ್ಟಿ ಇರುವ ಪಂಚೆ ಕೂಡ ಕೆಳಗೆ ಬೀಳದೆ ಆಗೆ ಇದ್ದು, ಕುತ್ತಿಗೆ ಮೇಲೆ ಬಿಳಿ ಬಣ್ಣದ ಟವಲ್ ಕೂಡ ಕೆಳಗೆ ಬಿದ್ದಿರುವುದಿಲ್ಲ. ಎಲ್ಲಾವನ್ನು ಗಮನಿಸಿದರೇ ಯಾರೋ ವೈರಿಗಳು ಇಲ್ಲವೇ ಹಣಕ್ಕಾಗಿ ಈ ಕೃತ್ಯ ಎಸಗಿ ಪರಾರಿಯಾಗಿರಬಹುದು ಎಂಬ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಈತನಿಗೆ ಸುಮಾರು 50 ರಿಂದ 55 ವರ್ಷದ ಒಳಗಿನವರೆಂದು ತಿಳಿದು ಬಂದಿದೆ.

     ಶನಿವಾರ ಬೆಳಿಗ್ಗೆ ವಾಯು ವಿಹಾರಕ್ಕೆಂದು ಬರುವವರು ಈ ದೃಶ್ಯವನ್ನು ನೋಡಿ ಪೊಲೀಸ್ 100ಗೆ ಕರೆ ಮಾಡಿದರೂ ಯಾರೋ ಕೂಡ ಸ್ಪಂದಿಸದಿರುವುದು ಕಂಡು ಬಂದಿತು. ತುಂಬ ಸಮಯದ ನಂತರ ಮೃತ ದೇಹವನ್ನು ನಗರದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ನಗರದ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News