×
Ad

ದಕ್ಷಿಣ ಪದವಿಧರರ ಕ್ಷೇತ್ರದ ಚುನಾವಣೆ : ಪ್ರಥಮ ಪ್ರಾಶಸ್ತ್ಯದ ಮತ ನೀಡಲು ಆರ್.ಕೆ. ಗೋವಿಲ್ ಮನವಿ

Update: 2016-06-04 16:38 IST

ಹಾಸನ: ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಪಕ್ಷೇತರ ಅಭ್ಯರ್ಥಿ ಆರ್.ಕೆ. ಗೋವಿಲ್ ಮನವಿ ಮಾಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಗುಂಜಾನರಸಿಂಹಸ್ವಾಮಿ ಚಾರಿಟಬಲ್ ಟ್ರಸ್ಟ್, ಟಿ. ನರಸೀಪುರ ಏಕಲವ್ಯ ತಾಂತ್ರಿಕ ಮಹಾವಿದ್ಯಾಲಯ ಇದೆ ರೀತಿ ಅನೇಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಈಗ ಎಂಎಲ್‌ಸಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಲಾಗುತ್ತಿದೆ.ಸಾವಿರಾರು ಸ್ನೇಹಿತರು ಬಂಧು ಬಳಗ ಮತ್ತು ಅಭಿಮಾನಿಗಳು ಹಾಗೂ ಸಂಘಟನೆಗಳು ಸ್ವಯಂಪ್ರೇರಿತವಾಗಿ ನನ್ನ ಪರ ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು. ಸಾವಿರಾರು ಪದವಿಧರರನ್ನು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಳು ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.

    ರಾಜ್ಯದಲ್ಲಿ ಯಾವ ಸರ್ಕಾರವಿರಲಲಿ ಆ ಸರ್ಕಾರದೊಂದಿಗೆ ವಿಶ್ವಾಸ ಸಂಬಂಧ ಬೆಳೆಸಿ ನಿರುದ್ಯೋಗಿ ಪದವಿಧರರು ಸ್ವಯಂ ಉದ್ಯೋಗ ಮಾಡಲು ಶೇಕಡ ಸೂನ್ಯ ಬಡ್ಡಿ ಧರದಲ್ಲಿ ಸರ್ಕಾರದಿಂದ ನೇರ ಸಾಲ ಒದಗಿಸುವ ಕೆಲಸ ಮಾಡಲಾಗುವುದು. ಅರೆ ಸರ್ಕಾರಿ ನೌಕರರನ್ನು ಖಾಯಂಗೊಳಿಸುವ, ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಉದ್ಯೋಗ ಭದ್ರತೆ ದೊರಕಿಸುವ ಇನ್ನು ನಾನಾ ಗುರಿ ಹೊಂದಿರುವುದಾಗಿ ಹೇಳಿದರು.

    ಜೂನ್ 9 ರಂದು ನಡೆಯುವ ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಆಶಿರ್ವಾದದ ಬೆಂಬಲ ಕೊಡುವಂತೆ ಮನವಿ ಮಾಡಿದರು.

   ಪತ್ರಿಕಾಗೋಷ್ಠಿಯಲ್ಲಿ ದೇವರಾಜ್, ಮಂಜುನಾಥ್, ಕೇಬಲ್ ರಾಮಣ್ಣ, ಸೋಮೇಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News