×
Ad

ಪೊಲೀಸರ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ

Update: 2016-06-04 22:19 IST

ಶಿವಮೊಗ್ಗ, ಜೂ.4: ಪೊಲೀಸ್ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿವಮೊಗ್ಗ ನಗರದಲ್ಲಿ ಶನಿವಾರ ಅಕ್ಷರಶಃ ಪ್ರತಿಭಟನೆಗಳ ಸುರಿಮಳೆಯಾಯ್ತು..! ಹೌದು. ಸಾಲುಸಾಲು ನಾಗರಿಕ ಸಂಘಟನೆಗಳು ಪೊಲೀಸರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಬೀದಿಗಿಳಿದು ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಅರ್ಪಿಸಿದವು. ಇದರಿಂದಾಗಿ ಡಿಸಿ ಕಚೇರಿ ಆವರಣ ಪ್ರತಿಭಟನಾಕಾರರಿಂದ ತುಂಬಿ ತುಳುಕುತ್ತಿತ್ತು.

ಕೆಲ ಸಂಘಟನೆಗಳು ಪ್ರತಿಭಟನಾ ರ್ಯಾಲಿಯ ಮೂಲಕ ಡಿಸಿ ಕಚೇರಿಗೆ ಆಗಮಿಸಿದರೆ, ಮತ್ತೆ ಕೆಲ ಸಂಘಟನೆಗಳು ಕಚೇರಿ ಆವರಣದಲ್ಲಿ ಧರಣಿ ನಡೆಸಿದವು. ಸಂಘಟನೆಯೊಂದು ಬೈಕ್ ರ್ಯಾಲಿ ನಡೆಸಿದರೆ, ಮತ್ತೊಂದು ಸಂಘಟನೆ ಆಟೊ ರ್ಯಾಲಿ ಮಾಡಿತು. ಉಳಿದ ಸಂಘಟನೆಗಳು ಡಿಸಿ ಕಚೇರಿ ಅಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿ ಹಿಂದಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

 ನವ ಕರ್ನಾಟಕ ನಿರ್ಮಾಣ ವೇದಿಕೆ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನಾಗರಿಕ ಹಕ್ಕುಗಳ ಜಾಗೃತಿ ಸಮಿತಿ, ಭಗತ್ ಸಿಂಗ್ ಹೋರಾಟ ಸಮಿತಿ, ವಿದ್ಯಾನಗರದ ಮಾತೆಂಗಮ್ಮ ಬೀದಿ ನಿವಾಸಿಗಳು, ಪ್ರಾಂಜಲ ಶಿವಪ್ಪ ನಾಯಕ ಸೇನೆ ಹಾಗೂ ರೈಲ್ವೆ ನಿಲ್ದಾಣದ ಆಟೋ ಚಾಲಕರು ಮತ್ತು ಮಾಲಕರ ಸಮಿತಿ ಮತ್ತಿತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಪೊಲೀಸರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ ಅರ್ಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News