×
Ad

ಹಾಸನ: ರಾಷ್ಟ್ರೀಯ ಪಂಜಕುಸ್ತಿಯಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಾಧನೆ

Update: 2016-06-05 17:51 IST

ಹಾಸನ, ಜೂ.5: ರಾಷ್ಟ್ರೀಯ ಪಂಜಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲಾ ಕ್ರೀಡಾಪಟುಗಳು ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ.

ಮಧ್ಯ ಪ್ರದೇಶದ ಜಬ್ಬಲ್‌ಪುರದಲ್ಲಿ ಮೇ.28 ರಿಂದ 30ರ ವರೆಗೂ ನಡೆದ ರಾಷ್ಟ್ರೀಯ ಪಂಜಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲಾ ಪಂಜಕುಸ್ತಿ ಸಂಸೆ ್ಥ ವತಿಯಿಂದ ಭಾಗವಹಿಸಿದ್ದ ಹಾಸನದ ಜಿಲ್ಲಾ ಕ್ರೀಡಾಪಟುಗಳು ಸಾಧನೆಗೈದಿದ್ದಾರೆ. ಐಸಿರಿ ಪಿಟನೆಸ್‌ನ ಹರಿಣಾಕ್ಷಿ, ಮಮತಾ ಗುರು, ಎಂ.ಪಿ. ಪೂಜಾ. ಟಪ್ ಲುಕ್ ಪಿಟನೆಸ್ ಜಿವ್ನ ವಿಷ್ಣು ಶಾಂತೇಗೌಡ, ಐಸಿರಿ ಪಿಟನೆಸ್‌ನ ರೋಹಿಣಿ, ಕೆ.ಎಂ. ಪೂಜಾ ಇವರುಗಳು ಹಾಸನ ಜಿಲ್ಲೆಗೆ ಕೀರ್ತಿ ತಂದವರು.

ನವೆಂಬರ್ ತಿಂಗಳಲ್ಲಿ ನಡೆಯುವ ಇಟಲಿಯ ಟರ್ಕಿಯ ಅಂತಾರಾಷ್ಟ್ರೀಯ ಮಟ್ಟದ ವಿಶ್ವಪಂಜ ಕುಸ್ತಿ ಸ್ಪರ್ಧೆಗೆ ಆಯ್ಕೆಗೊಂಡವರು. ಐಸಿರಿ ಪಿಟನೆಸ್‌ನ ಹರಿಣಾಕ್ಷಿ, ಮಮತಾ ಗುರು, ಎಂ.ಪಿ. ಪೂಜಾ. ಟಪ್ ಲುಕ್ ಪಿಟನೆಸ್ ಜಿವ್ನ ವಿಷ್ಣು ಶಾಂತೇಗೌಡ. ಇವರಿಗೆ ಕ್ಷೇತ್ರದ ಶಾಸಕ ಹೆಚ್.ಎಸ್. ಪ್ರಕಾಶ್ ಹಾಗೂ ಸದಸ್ಯರು ಮತ್ತು ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಇದೆ ವೇಳೆ ಹಾಸನ ಜಿಲ್ಲಾ ಪಂಜ ಕುಸ್ತಿ ಸಂಘದ ಕಾರ್ಯದರ್ಶಿ ಎ.ವಿ. ಮೋಹನ್‌ಕುಮಾರ್, ಖಜಾಂಚಿ ಜೆ.ಐ. ನಿರಂಜನ್ ರಾಜ್, ಸಲಹಾ ಸಮಿತಿ ಅಧ್ಯಕ್ಷ ಕೈಲಾಸ್ ಶಂಕರ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News