×
Ad

ಮೂಡಿಗೆರೆ ಅರಣ್ಯ ಇಲಾಖೆಗೆ ಡ್ರೋನ್ ಕಣ್ಗಾವಲು: ವಿನಯ್ ಲೋತ್ರ

Update: 2016-06-05 22:26 IST

ಮೂಡಿಗೆರೆ, ಜೂ.5: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಮೂಡಿಗೆರೆ ಅರಣ್ಯ ಇಲಾಖೆಗೆ ಡ್ರೋನ್ ಕ್ಯಾಮರ ಬಳಕೆಯಾಗುತ್ತಿ ರುವು ದರಿಂದ ಕಾಡಿನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸ ಬಹುದಾಗಿದೆ ಎಂದು ನಿವೃತ್ತ ಪಿಸಿಸಿಎಫ್ ವಿನಯ್ ಲೋತ್ರ ಅಭಿಪ್ರಾಯಿಸಿದ್ದಾರೆ.

ಮೂಡಿಗೆರೆ ಅರಣ್ಯ ಇಲಾಖೆಗೆ ಡ್ರೋನ್ ಕ್ಯಾಮರಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.

ಡ್ರೋನ್‌ಕ್ಯಾಮರಾಗಳ ಬಳಕೆಯಿಂದ ಪ್ರಾಣಿಗಳ ಗಣತಿ, ಆನೆಗಳ ಇರುವಿಕೆ ಬಗ್ಗೆ ಕ್ಷಣಾರ್ಧದಲ್ಲಿ ತಿಳಿಯಬಹುದಾಗಿದ್ದು, ಕಾಡಾನೆಗಳ ಹಾವಳಿ ನಿಯಂತ್ರಿಸಲು ಮತ್ತು ಕಾಡಾನೆಗಳನ್ನು ಕಾಡಿಗಟ್ಟಲು ಸಹಕಾರಿ ಯಾಗಲಿದೆ ಎಂದರು. ಮಲೆನಾಡಿನಲ್ಲಿ ಮಳೆ ಕೊರತೆ ಇದ್ದರೂ ಪ್ರಾಣಿಗಳಿಗೆ ಕುಡಿಯುವ ನೀರಿಗೆ ತೊಂದರೆ ಯಾಗಿಲ್ಲ. ಹಾಗಾಗಿ ಈ ಬಾರಿ ಬೇಸಿಗೆಯಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕಿಲ್ಲ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ತಿಳಿಸಿದರು.

ಅವರು ಡ್ರೋನ್ ಅರಣ್ಯ ಕಣ್ಗಾವಲು ಹೆಲಿಕಾಪ್ಟರ್ ಬಿಡುಗಡೆ ವೇಳೆ ಪತ್ರಕರ್ತ ರೊಂದಿಗೆ ಮಾತನಾಡಿ, ಮೂಡಿಗೆರೆ ವಲಯ ದಲ್ಲಿ 22 ಸಾವಿರ ಹೆಕ್ಟೇರ್, ಆಲ್ದೂರಿನಲ್ಲಿ 10 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಮೂಡಿಗೆರೆ ವಲಯ ಅರಣ್ಯಧಿಕಾರಿ ಎಸ್.ಪಿ. ಮಹದೇವ್, ಆಲ್ದೂರು ವಲಯ ಅರಣ್ಯಾ ಧಿಕಾರಿ ಜಯಕುಮಾರ್ ಪರಿಶ್ರಮ ದಿಂದ ಕಾಡಿನ ಆಯ್ದ ಭಾಗಗಳಲ್ಲಿ ಕೇದಿಗೆ ಇರುವ ಬಳಿ 20 ಮೀ ಉದ್ದ, 15 ಮೀಟರ್ ಅಗಲ, ಎರಡೂವರೆ ಅಡಿ ಆಳದ ಮೂಡಿಗೆರೆ ವಲಯದಲ್ಲಿ 25 ಮತ್ತು ಆಲ್ದೂರು ವಲಯಗಳಲ್ಲಿ 12 ಕೆರೆಗಳನ್ನು ತೆಗೆಯಲಾಗಿದೆ.ಅಲ್ಲಿಗೆ ಯಥೇಚ್ಚ ನೀರು ದೊರೆತಿರುವುದರಿಂದ ಆನೆ, ಜಿಂಕೆ ಮತ್ತು ಕಾಡುಪ್ರಾಣಿಗಳು ನಾಡಿಗೆ ಬಂದಿಲ್ಲ ಎಂದು ಮಾಹಿತಿ ನಿಡಿದರು.

 ಮೂಡಿಗೆರೆ ವಲಯ ಅರಣ್ಯಾಧಿಕಾರಿ ಎಸ್.ಪಿ.ಮಹದೇವ್ ಮಾತನಾಡಿ, ಕಾಡು ಪ್ರಾಣಿಗಳಿಗೆ ಆಹಾರದ ಕೊರತೆಯನ್ನು ನೀಗಿಸುವ ಸಲುವಾಗಿ ಕಾಡಿನಲ್ಲಿ ಕಳೆದ ಕೆಲವು ವರ್ಷಗಳಿಂದ ಬಿದಿರು, ಮಾವು, ಹೆಬ್ಬಲಸು, ನೇರಳೆ, ವಾಟೆ, ಬೈನೆ ಸೇರಿದಂತೆ ಅನೇಕ ವಿಧದ ಗಿಡಗಳನ್ನು ನೆಡಲಾಗಿದೆ. ಸದ್ಯದಲ್ಲೇ ಫಸಲು ಬಿಡುವುದರಲ್ಲಿದ್ದು ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಲು ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಸಿಸಿಎಫ್ ನಾಗರಾಜ್, ಡಿಎಫ್‌ಒ ಮಾಣಿಕ್, ಹಾಸನ ಸಿಸಿಎಫ್ ರಂಗಸ್ವಾಮಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಅರಣ್ಯಾಧಿಕಾರಿಗಳಾದ ಎಸ್.ಪಿ. ಮಹದೇವ್, ಜಯಕುಮಾರ್, ಚಿಕ್ಕಮಗಳೂರು ಅರಣ್ಯಾಧಿಕಾರಿ ಅಬ್ದುಲ್ ಅಝೀಝ್‌ಉಪಸ್ಥಿತರಿದ್ದರು.

ಕೊಡಗು ಬ್ಯಾರೀಸ್ ವೆಲ್‌ಫೇರ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News