ದಾನ ಧರ್ಮ ಪ್ರತಿಯೊಬ್ಬರ ಕರ್ತವ್ಯ: ಮುಫ್ತಿ ಇಫ್ತಿಕಾರ್ ಅಹ್ಮದ್
Update: 2016-06-05 22:33 IST
ಸಾಗರ, ಜೂ.5: ದಾನ ಧರ್ಮ ಮಾಡುವುದು ಪ್ರತಿಯೊಬ್ಬ ಕರ್ತ್ಯ. ಮುಸ್ಲಿಮ್ ಜನಾಂಗದಲ್ಲಿ ಆರ್ಥಿಕವಾಗಿ ತೀರ ಹಿಂದುಳಿದವರಿದ್ದಾರೆ. ಅಂತಹವರನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಶಿವಮೊಗ್ಗದ ಖಾಝಿ ಮುಫ್ತಿ ಇಫ್ತಿಕಾರ್ ಅಹ್ಮದ್ ಹೇಳಿದರು. ಇಲ್ಲಿನ ಇಂಧಾದುಲ್ ಉಲೂಂ ಮದ್ರಸದ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಸಫಾ ಬೈತುಲ್ ಮಾಲ್ ಸ್ಥಳೀಯ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾ
ುತ್ತಿದ್ದರು. ಸಂಸ್ಥೆಯ ಅಧ್ಯಕ್ಷವೌಲಾನಾ ಮುಹಮ್ಮದ್ ಕಲೀಮುಲ್ಲಾ ಅಧ್ಯಕ್ಷತೆ ವಹಿಸಿದರು. ವೇದಿಕೆ ಯಲ್ಲಿ ನಗರಸಭಾ ಸದಸ್ಯ ಮನ್ಸೂರ್ ಅಲಿಖಾನ್, ಉದ್ಯಮಿ ಇಕ್ಬಾಲ್, ಫಯಾಝ್ , ಸಂಸ್ಥೆಯ ಕಾರ್ಯದರ್ಶಿ ಮೊಹ್ಸಿನ್ ಖಾನ್, ಖಜಾಂಚಿ ಹನೀಫ್, ಇರ್ಶಾದ್ ಅಲಿಖಾನ್, ಹಾಫೀಜ್ ಶಫಿವುಲ್ಲಾ, ರಹೀಂ ಸಾಬ್ ಮಕ್ಬೂಲ್ ಅಹ್ಮದ್ ಉಪಸ್ಥಿತರಿದ್ದರು.