ಬಸ್-ಸ್ಕೂಟರ್ ಢಿಕ್ಕಿ: ಓರ್ವ ಮೃತ್ಯು
Update: 2016-06-07 23:32 IST
ಮಡಿಕೇರಿ, ಜೂ.7: ಕೆಎಸ್ಸಾರ್ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿ ಸ್ಕೂಟರ್ ಚಾಲಕ ಮೃತಪಟ್ಟಿರುವ ಘಟನೆ ಮಂಗಳೂರು ರಸ್ತೆಯ ಕೊಯನಾಡಿನಲ್ಲಿ ನಡೆದಿದೆ.
ಮದೆನಾಡಿನ ನಿವಾಸಿ ರವಿ (38)ಮೃತ ವ್ಯಕ್ತಿ. ಸ್ಕೂಟರ್‌ನಲ್ಲಿ ಮಡಿಕೇರಿಗೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಬಸ್ ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ತಲೆಗೆ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ರವಿಯನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆ ತರುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಅಪಘಾತದಿಂದ ಸ್ಕೂಟರ್ ನಜ್ಜುಗುಜ್ಜಾಗಿದ್ದು, ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ