ತೆಂಗಿನ ಮರ ಬಿದ್ದು ಅಪಾರ ಹಾನಿ
Update: 2016-06-07 23:33 IST
ಅಂಕೋಲಾ, ಜೂ.7: ತಾಲೂಕಿನ ಬೆಳಂಬಾರದಲ್ಲಿ ಸೋಮವಾರ ರಾತ್ರಿ ಮಳೆಗಾಳಿಯಿಂದಾಗಿ ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದು ಅಪಾರ ಹಾನಿಯಾದ ಘಟನೆ ನಡೆದಿದೆ. ಲಲಿತಾ ಕೃಷ್ಣ ನಾಯ್ಕ ಎನ್ನುವವರಿಗೆ ಸೇರಿದ ಮನೆಯೇ ಹಾನಿಗೊಳಗಾದದ್ದಾಗಿದೆ. ಬೆಳಂಬಾರ ಗ್ರಾಪಂ ಅಧ್ಯಕ್ಷೆ ಬೇಬಿ ವಿ. ಗೌಡ, ಉಪಾಧ್ಯಕ್ಷ ವಿಜಯ ಖಾರ್ವಿ, ಸದಸ್ಯರಾದ ದತ್ತಾತ್ರೇಯ ಡಿ. ನಾಯ್ಕ, ಉಲ್ಲಾಸ ಶೇಣ್ವಿ, ಜಗದೀಶ ಖಾರ್ವಿ, ಪಿಡಿಒ ಪೂರ್ಣಿಮಾ ಗೌಡ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೆೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು 55 ಸಾವಿರ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.