×
Ad

ಬೇಡಿಕೆ ಈಡೇರಿಸಲು ಆಗ್ರಹಿಸಿ ಮನವಿ

Update: 2016-06-07 23:34 IST

ಅಂಕೋಲಾ, ಜೂ.7 : ಪೊಲೀಸರ ವಿವಿಧ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸುವ ಬದಲು ಅವರ ಪ್ರತಿಭಟನೆ ಯನ್ನೆ ಹತ್ತಿಕ್ಕಿದೆ. ಸರಕಾರ ಅವರ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ), ಶಾಂತಾದುರ್ಗಾ ರಿಕ್ಷಾ ಮಾಲಕರು ಹಾಗೂ ಚಾಲಕರ ಅಭಿವೃದ್ಧಿ ಸಂಘದವರು ಮಂಗಳವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸುನೀಲ್ ನಾಯ್ಕ ಹೊನ್ನೆಕೇರಿ ಮಾತನಾಡಿ, ಪೊಲೀಸರು ಸಮಾಜದ ಎಲ್ಲ ಆಗು ಹೋಗುಗಳಿಗೂ ಸ್ಪಂದಿಸುತ್ತಾರೆ. ಇತರೇ ನೌಕರರಿಗೆ 8 ತಾಸು ಕೆಲಸದ ಸಮಯವಿದ್ದರೆ, ಪೊಲೀಸರಿಗೆ ಮಾತ್ರ ನಿರ್ದಿಷ್ಟ ಸಮಯವಿಲ್ಲದೆ ಕೆಲವೊಮ್ಮೆ 24 ಗಂಟೆಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಇತರೇ ರಾಜ್ಯಗಳಲ್ಲಿ ಪೊಲೀಸರಿಗೆ ಕರ್ನಾಟಕಕ್ಕಿಂತ ದುಪ್ಪಟ್ಟು ಸಂಬಳವನ್ನು ನೀಡಲಾಗುತ್ತಿದೆ. ನ್ಯಾಯಕ್ಕಾಗಿ ಹೋರಾಡಲು ಮುಂದಾದ ಪೊಲೀಸರನ್ನು ಸರಕಾರ ಹತ್ತಿಕ್ಕಿದೆ. ಇನ್ನಾದರೂ ಇವರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

ಪೊಲೀಸ್ ಠಾಣೆಗೆ ಆಗಮಿಸಿದ ಸಂಘಟನೆಯವರು ನಿಮ್ಮ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿ ಪೊಲೀಸರಿಗೆ ಸಿಹಿ ತಿನ್ನಿಸಿದರು. ಈ ಸಂದರ್ಭ ಪ್ರಮುಖರಾದ ಅಮರ ನಾಯ್ಕ, ರವಿ ನಾಯ್ಕ, ಪ್ರಸನ್ನ ನಾಯ್ಕ, ಕಿರಣ ನಾಯ್ಕ, ಸೂರಜ ನಾಯ್ಕ, ಉಮೇಶ ನಾಯ್ಕ, ಸುಧಾಕರ ಬಲೆಗಾರ, ರಾಮ ಗೌಡ ಇತರರಿದ್ದರು. ಶಿರಸ್ತೇದಾರ ಪಿ.ಬಿ. ಗೌಡ ಮನವಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News