×
Ad

ಭಟ್ಕಳ: ಜಿ.ಎಸ್.ಬಿ ಸಮಾಜ ಕಲ್ಯಾಣ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರ

Update: 2016-06-07 23:41 IST

ಭಟ್ಕಳ, ಜೂ.7: ಗೌಡ ಸಾರಸ್ವತ ಸಮಾಜ ಕಲ್ಯಾಣ ಸೇವಾ ಸಮಿತಿಯು ಟ್ಕಳ ತಾಲೂಕಾ ಸ್ವಸಮಾಜದ ಎಸೆಸೆಲ್ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಸಭಾಗೃಹದಲ್ಲಿ ಹಮ್ಮಿಕೊಂಡಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ವಿದ್ಯಾಂಜಲಿ ಶಾಲೆಯ ಪ್ರಾಂಶುಪಾಲ ನವೀನ ಎಸ್., ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಿರುವ ವಿಫುಲ ಅವಕಾಶಗಳ ಬಗ್ಗೆ ಸಚಿತ್ರ ಸಹಿತ ವಿವರಣೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸ್ಕಾಲರ್‌ಶಿಪ್, ಶಿಕ್ಷಣ ಸಾಲದ ಬಗ್ಗೆ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು. ಎಸೆಸೆಲ್ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ 21 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಹರಿಶ್ಚಂದ್ರ ಕಾಮತ್, ನರೇಂದ್ರ ನಾಯಕ್, ಲತಾ ಪೈ, ಸುಬ್ರಾಯ ಕಾಮತ್, ಅಧ್ಯಕ್ಷ ಕಿರಣ ಶಾನುಭಾಗ್ ಮುಂತಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಅನಿಲ ಪೈ ಸ್ವಾಗತಿಸಿದರು, ಶ್ರೀನಾಥ ಪೈ ನಿರೂಪಿಸಿದರು. ಗಿರಿಧರ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News