ಕ್ಲೀನರ್‌ನ ಆವಾಂತರಕ್ಕೆ ಲಾರಿ ಚಾಲಕ ಬಲಿ
ಮುಂಡಗೋಡ, ಜೂ.8: ತಾಲೂಕಿನ ಕಾತೂರ ಗ್ರಾಮದ ಸಿದ್ದನಕೊಪ್ಪಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕ ಬಲಿಯಾದ ಘಟನೆ ಸಂಭವಿಸಿದೆ.
ಮೃತಪಟ್ಟ ಚಾಲಕನನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಲಿಂಗದಾಳ ಗ್ರಾಮದ ನಿವಾಸಿ ಮಂಜುನಾಥ ಭೀಮಪ್ಪ ಮೇಟಿ (31) ಎಂದು ಗುರುತಿಸಲಾಗಿದೆ.
ಈತ ಕೆಎ 29 ಎ 1660 ನೋಂದಣಿಯ ಲಾರಿಯನ್ನು ಚಲಾಯಿಸಿಕೊಂಡು ಬಂದಿದ್ದ. ಸಿದ್ದನಕೊಪ್ಪಕ್ರಾಸ್ ಬಳಿ ರಸ್ತೆ ಪಕ್ಕ ಲಾರಿ ನಿಲ್ಲಿಸಿ ಟೈರ್ ಚೆಕ್ ಮಾಡುತ್ತಿದ್ದ ವೇಳೆ ಲಾರಿಯಲ್ಲಿದ್ದ ಕ್ಲೀನರ್ ನಿರ್ಲಕ್ಷ್ಯದಿಂದ ಲಾರಿಯನ್ನು ಮುಂದಕ್ಕೆ ಚಲಾಯಿಸಿದ್ದು, ಟೈರ್ ಚೆಕ್ ಮಾಡುತ್ತಿದ್ದ ಚಾಲಕನ ಸೊಂಟದ ಮೇಲೆಯೇ ಟೈರ್ ಹರಿದಿದೆ.
ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕ್ಲೀನರ್ ಸ್ವಲ್ಪಮುಂದಕ್ಕೆ ಲಾರಿಯನ್ನು ಚಲಾಯಿಸಿದ್ದವನು ಲಾರಿಯನ್ನು ನಿಲ್ಲಿಸಿ ನಾಪತ್ತೆಯಾಗಿದ್ದಾನೆ. ಅಪಘಾತಕ್ಕೆ ಕಾರಣನಾದ ಲಾರಿ ಕ್ಲೀನರ್‌ನ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡ ಮುಂಡಗೋಡ ಪೊಲೀಸರು ಆತನ ಪತ್ತೆಗಾಗಿ ಶೋಧ ನಡೆಸಿದ್ದಾರೆ.