ಇನ್ನು ಇಂಜಿನಿಯರಿಂಗ್‌ಗೂ ನೀಟ್ ಮಾದರಿ ಒಂದೇ ಪ್ರವೇಶ ಪರೀಕ್ಷೆ?

Update: 2016-06-08 17:08 GMT

ಬೆಂಗಳೂರು, ಜೂ.8: ದೇಶಾದ್ಯಂತಎಲ್ಲ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೂ ನೀಟ್ ಮಾದರಿಯಒಂದೇ ಪ್ರವೇಶ ಪರೀಕ್ಷೆ ವ್ಯವಸ್ಥೆಯನ್ನುಜಾರಿಗೆತರುವ ಸಾಧ್ಯತೆಗಳಿವೆ. ಎಲ್ಲ ಇಂಜಿನಿಯರಿಂಗ್ ಪದವಿಗಳಿಗೆ ಪ್ರವೇಶ ಪಡೆಯಲು ಜೆಇಇ-ಮೈನ್ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಸಾಧ್ಯತೆ ಬಗ್ಗೆ ಅಖಿಲ ಭಾರತತಾಂತ್ರಿಕ ಶಿಕ್ಷಣ ಮಂಡಳಿ ಪರಿಶೀಲಿಸುತ್ತಿದೆ.
ಇದೀಗ ಕೇಂದ್ರೀಯ ಸೆಕೆಂಡರಿ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ದೇಶದ ಐಐಟಿ ಹಾಗೂ ಇತರ ಕೇಂದ್ರ ಅನುದಾನಿತ ಸಂಸ್ಥೆಗಳಿಗೆ ಪ್ರವೇಶಕ್ಕಾಗಿ ಜೆಇಇ-ಮೈನ್ ಪರೀಕ್ಷೆಯನ್ನು ನಡೆಸುತ್ತಿದೆ.
 
ಕೆಲ ರಾಜ್ಯಗಳು ಈಗಾಗಲೇ ಜೆಇಇ ಮೈನ್ ಪರೀಕ್ಷೆಯನು ್ನತಮ ್ಮರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿದೇಶಾದ್ಯಂತಜೆಇಇ- ಮೈನ್ ಪರೀಕ್ಷೆಯನ್ನು ಏಕೈಕ ಪ್ರವೇಶ ಪರೀಕ್ಷೆಯಾಗಿ ಮಾರ್ಪ ಡಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಡಿ.ಸಹಸ್ರಬುದ್ಧೆ ತಿಳಿಸಿದ್ದಾರೆ. ಆದರೆ, ಜೆಇಇ ಪರೀಕ್ಷೆ ಸಿಬಿಎಸ್‌ಇ ಪಠ್ಯಕ್ರಮಕ್ಕೆ ಅನುಸಾರವಾಗಿದೆ. ಹಲವು ರಾಜ್ಯಗಳು ವಿವಿಧ ಪಠ್ಯಗಳನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಏಕ ಪರೀಕ್ಷೆ ಪದ್ಧತಿ ಇನ್ನೂ ಯೋಜನೆಯ ಹಂತದಲ್ಲೇ ಇದೆಎಂದು ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ ಶಿಕ್ಷಣದಂತೆ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಶಿಕ್ಷಣ ಪ್ರವೇಶಕ್ಕೆ ಹಲವು ಪರೀಕ್ಷೆಗಳನ್ನು ಬರೆಯುವುದನ್ನು ತಪ್ಪಿಸುವ ಸಲುವಾಗಿ ಈ ವ್ಯವಸ್ಥೆಆರಂಭಿಸಲು ಯೋಚಿಸಲಾಗು ತ್ತಿದೆ. ಕರ್ನಾಟಕದಲ್ಲಿ ವಿದ್ಯಾರ್ಥಿಗಳು, ಸಿಇಟಿ, ಕಾಮೆಡ್‌ಕೆ, ಜೆಇಇ ಹಾಗೂ ವಿವಿಧ ಸ್ವಾಯತ್ತ ವಿಶ್ವವಿದ್ಯಾನಿಲಯಗಳ ಪ್ರವೇಶ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ ಎಂದು ಉದಾಹರಿಸಿದರು.
ಎಐಸಿಟಿಇ ನಿಯೋಗ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಗೆ ಭೇಟಿ ನೀಡಿ, ಮೂಲಸೌಕರ್ಯಕೊರತೆ, ಕಡಿಮೆ ವಿದ್ಯಾರ್ಥಿ ಬಲ, ವಿವಿಧ ಸೌಲಭ್ಯಗಳು ಹಾಗೂ ಪರಿಕರಗಳ ಕೊರತೆಗಳನ್ನು ಪರಿಶೀಲಿಸಲಿದೆ.ಅಂಥ ಲೋಪಗಳು ಕಂಡುಬಂದಲ್ಲಿ ಕಾಲೇಜುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News