×
Ad

ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭ: ಹರಿಪ್ರಸಾದ್

Update: 2016-06-08 23:04 IST

ತರೀಕೆರೆ. ಜೂ.8: ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಿ ನಂತರ 1ನೆ ತರಗತಿಗೆ ಮಕ್ಕಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಬಿಇಒ ಹರಿಪ್ರಸಾದ್ ಹೇಳಿದರು.

ಅವರು ಕೆ.ಚಟ್ಣಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ ಎಂದರು.

ಬಿಆರ್‌ಸಿ ತಿಮ್ಮಯ್ಯ ಮಾತನಾಡಿ, ಶಿಕ್ಷಣ ಬಡವರಿಗೆ ಆಸ್ತಿಯಾದರೆ, ಶ್ರೀಮಂತರಿಗೆ ಆಭರಣವಾಗಿದೆ. ಸರಕಾರಿ ಶಾಲೆಗಳಲ್ಲಿ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮವನ್ನು ಒಂದು ವಿಷಯವಾಗಿ ಬೋಧಿಸಲಾಗುವುದು. ತಾಲೂಕಿನ 36ಸರಕಾರಿ ಶಾಲೆಗಳಲ್ಲಿ 6ನೆ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸಲಾಗಿದೆ ಎಂದು ತಿಳಿಸಿದರು.

ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ರಾಮಚಂದ್ರಪ್ಪಮಾತನಾಡಿ, ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡಲು ಶ್ರಮಿಸುವ ಬದಲು ಮಕ್ಕಳನ್ನೆ ದೊಡ್ಡ ಆಸ್ತಿಯಾಗಿ ರೂಪಿಸಲು ಮುಂದಾಗಬೇಕು ಎಂದರು.

 ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಶಿನಾಯ್ಕ, ಸದಸ್ಯರಾದ ಈಶ್ವರಪ್ಪ, ಕವಿತಾಬಾಯಿ, ಕಟ್ಟಡದ ದಾನಿ ಓಂಕಾರಮೂರ್ತಿ, ಗ್ರಾಪಂ ಸದಸ್ಯರಾದ ಲಲಿತಮ್ಮ, ಟಿ.ಕೃಷ್ಣಮೂರ್ತಿ, ಶಿಕ್ಷಕರಾದ ಆಂಜನೇಯ, ಎಸ್.ಟಿ.ತಿಪ್ಪೇಶಪ್ಪ, ಯೋಗೀಶ್, ಮುಖಂಡರಾದ ನಾರಾಯಣಬೋವಿ, ಪುಟ್ಟಣ್ಣ, ಷಣ್ಮುಖಪ್ಪ, ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News