×
Ad

ತೋಟಗಾರಿಕೆ, ಕೆತೋಟ ಬೆಳೆಗಳಿಗೆ ಉಚಿತ ಗೊಬ್ಬರ: ಸಚಿವ ಶಾಮನೂರು

Update: 2016-06-08 23:10 IST

ದಾವಣಗೆರೆ, ಜೂ. 8: ಮನೆಯಲ್ಲಿಯೇ ತಾರಸಿ ಕೈತೋಟ ನಿರ್ಮಿಸಿ ಸಾವಯವ ಗೊಬ್ಬರದ ಮೂಲಕ ತಾಜಾ ತರಕಾರಿ ಬೆಳೆದರೆ, ಹಣದ ಜೊತೆೆ ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಬುಧವಾರ ನಗರದ ಎಂಸಿಸಿ ‘ಎ’ ಬ್ಲಾಕ್‌ನಲ್ಲಿರುವ ಬಸವ ಮಂಟಪದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೈತೋಟ ಮತ್ತು ತಾರಸಿ ತೋಟದ ತರಬೇತಿ ಕಾರ್ಯ ಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತೋಟಗಾರಿಕೆ ಬೆಳೆ, ಕೈತೋಟ ಮತ್ತಿತರ ಯೋಜನೆಗಳಿಗೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ತಾರಸಿ ಕೈತೋಟದಿಂದ ಮಹಿಳೆಯರಿಗೆ ತರಬೇತಿ ನೀಡಿ ಆರೋಗ್ಯ ಪೂರ್ಣ ತರಕಾರಿ, ಹಣ್ಣುಗಳನ್ನು ಬೆಳೆಯಲು ಸಹಕಾರಿಯಾಗಲಿದ್ದು, ತೋಟ ಗಾರಿಕೆ ಇಲಾಖೆಯಿಂದ ಉಚಿತ ಗೊಬ್ಬರ ಮತ್ತು ಕಿಟ್ ವಿತರಣೆ ಮಾ ಲಾಗುವುದು ಎಂದ ಅವರು, ಪ್ರತಿಯೊಬ್ಬರಿಗೆ ತರಬೇತಿಗಾಗಿ 200 ರೂ.ವೆಚ್ಚ ತಗಲಲಿದ್ದು, ಅದನ್ನು ಸಹ ನಾವೇ ಭರಿಸುತ್ತೇವೆ. ಇದರ ಸದುಪಯೋಗವನ್ನು ಮಹಿಳೆ ಯರು ಪಡೆದುಕೊಳ್ಳಬೇಕು ಎಂದು ಹೇಳಿದರು. ನಂತರ ಮೇಯರ್ ಅಶ್ವಿನಿ ಮಾತನಾಡಿ, ಇಂದಿನ ದಿನ ಗಳಲ್ಲಿ ತರಕಾರಿ ಬೆಲೆ ಗಗನಕ್ಕೇ ರುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯಲ್ಲಿ ತಮ್ಮ ತಮ್ಮ ಮನೆಯ ತಾರಸಿಯಲ್ಲೇ ಸಾವಯವ ತರಕಾರಿ ಬೆಳೆಯುವುದರಿಂದ ಹಣದ ಉಳಿತಾಯದ ಜೊತೆಗೆ ಆರೋಗ್ಯವು ಉತ್ತಮವಾಗಿರುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ಮನೆಗೊಂದು ತಾರಸಿ ನಿರ್ಮಿಸಿಕೊಳ್ಳಬೇಕು ಎಂದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವೇದಮೂರ್ತಿ ಮಾತನಾಡಿ, ನಗರವಾಸಿಗಳಿಗೆ ಗುಣಮಟ್ಟದ ತಾರಸಿ ಕೈತೋಟವನ್ನು ಬೆಳೆಯು ವುದಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಮಾಡಿದರು. ಈ ಸಂದರ್ಭದಲಿ

್ಲ ಬಸವಮಂಟಪದ ಅಧ್ಯಕ್ಷ ಟಿ.ಎಸ್. ಪಾಟೀಲ್, ಪಾಲಿಕೆ ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ರೇಖಾ ನಾಗರಾಜ್, ನಿರ್ಮಲಾ ಸುಭಾಷ್ ಉಪಸ್ಥಿತರಿದ್ದರು. ಅಕ್ಕ ಮಹಾದೇವಿ ಸಂಘದ ಮಹಿಳೆಯರು ಪ್ರಾರ್ಥಿಸಿದರು. ಯತಿರಾಜ್ ನಿರೂಪಿಸಿದರು. ನಂತರ ಕೃಷಿ ತಜ್ಞ ಎಂ.ಜಿ. ಬಸವನಗೌಡ ತಾರಸಿ, ಕೈತೋಟದ ಬಗ್ಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭ ತಾರಸಿ ತೋಟ ಮಾಡುವ ಆಸಕ್ತರಿಗೆ ಮಿನಿಕಿಟ್ ವಿತರಿಸಲಾಯಿತು. ರಸ್ತೆ ಅಭಿವೃದ್ಧಿಗೆ 150 ಕೋಟಿ ರೂ.

: ದಾವಣಗೆರೆ ನಗರದ ಅಭಿವೃದ್ಧಿಗಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದ್ದು, ನಗರದ ಸಿಮೆಂಟ್ ರಸ್ತೆ ಅಭಿವೃದ್ಧಿಗೆ ಎಪಿಎಂಸಿ ವತಿ ಯಿಂದ 150 ಕೋಟಿ ರೂ. ನೀಡಲಾಗಿದ್ದು, ಮಹಾನಗರ ಪಾಲಿಕೆಯಾಗಲಿ, ಪಿಡಬ್ಲುಡಿ ಯಾಗಲೀ ಹಣ ನೀಡಿಲ್ಲ. ಎಲ್ಲ ಹಣವನ್ನು ಎಪಿಎಂಸಿ ವತಿಯಿಂದ ನೀಡಲಾಗಿದೆ ಎಂದರು.

ಗಾಜಿನ ಮನೆ ನಿರ್ಮಾಣ: ಈಗಾಗಲೇ ನಗರದಲ್ಲಿ 15 ಪಾರ್ಕ್‌ಗಳನ್ನು ಪಡೆದು ಅಭಿವೃದ್ಧಿಗೊಳಿಸಿ ಪಾಲಿಕೆಗೆ ಹಸ್ತಾಂತರ ಮಾಡಲಾಗಿದ್ದು, ಈ ವರ್ಷವೂ 10ರಿಂದ 15 ಪಾರ್ಕ್ ಪಡೆದು ಅಭಿವೃದ್ಧಿಗೊಳಿಸಿ ನಗರದ ಜನತೆಗೆ ಉತ್ತಮ ಪರಿಸರ, ಆರೋಗ್ಯ ಒದಗಿಸಿಕೊಡಲಾಗುವುದು. ಕುಂದುವಾಡ ಕೆರೆಯ ಉದ್ಯಾನವನಕ್ಕೆ ಜರ್ಮನಿಯಿಂದ ಆಕರ್ಷಕ ಕಾರಂಜಿ, ಲೈಟ್‌ಗಳನ್ನು ತರಿಸಿ ಅಳವಡಿಸಲಾಗುತ್ತಿದೆ. ಅಲ್ಲದೆ, ಗಾಜಿನ ಮನೆ ನಿರ್ಮಾಣಕ್ಕೆ 5 ಕೋಟಿ ರೂ. ನೀಡಲಾಗಿದ್ದು, ರಾಜ್ಯದ ದಾವಣಗೆರೆ ಸೇರಿದಂತೆ ಬೆಳಗಾವಿ, ಮೈಸೂರುಗಳಲ್ಲಿ ಗಾಜಿನ ಅರಮನೆ ಸಿದ್ಧಗೊಳ್ಳಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News