ಗ್ರಾಮದ ಬೋರ್‌ವೆಲ್ ನೀರು ಗ್ರಾಮಕ್ಕೆ ಸಿಗಲೆಂದು ಒಂಟಿಯಾಗಿ ಧರಣಿ ಕೂತ ವ್ಯಕ್ತಿ
ಹಾಸನ, ಜೂ.9: ಮನೆಯೊಂದಕ್ಕೆ ಬಳಸಿಕೊಳ್ಳಲಾಗುತ್ತಿರುವ ಸಾರ್ವಜನಿಕರ ಕೊಳವೆ ಬಾವಿ ನೀರು ಗ್ರಾಮಕ್ಕೆ ಸಿಗುವಂತಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸದಸ್ಯ ಕೆ.ಎಸ್. ತೀರ್ಥಪ್ಪ ಒಂಟಿಯಾಗಿ ಪ್ರತಿಭಟನೆ ಮಾಡುವ ಮೂಲಕ ಗಮನಸೆಳೆದರು.
ಬೇಲೂರು ತಾಲೂಕು, ಬಿಕ್ಕೋಡು ಹೋಬಳಿಯ ಕೆಸಗೋಡು ಗ್ರಾಮ ಪಂಚಾಯತ್‌ನಲ್ಲಿ ಅವ್ಯವಹಾರ ನಡೆದಿದೆ. ವಳಲು ಗ್ರಾಮದ ಖಾಸಗಿ ವ್ಯಕ್ತಿ ದಿನೇಶ್ ಎಂಬವರು ತನ್ನ ಸ್ವಂತ ಮನೆಗೆ ಕೊಳವೆ ಬಾವಿಯನ್ನು ಉಪಯೋಗಿಸುತ್ತಿದ್ದಾರೆ. ಅಲ್ಲಿನ ಗ್ರಾಮ ಪಂಚಾಯತ್‌ಗೆ ಕೇಳಿದರೆ ಯಾವ ಪ್ರಯೋಜನವಾಗಿಲ್ಲ. ಜನ, ಜಾನುವಾರುಗಳು ಕುಡಿಯಲು ಕೆರೆಗಳಲ್ಲಿ ನೀರಿಲ್ಲದೆ ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ವಳಲು ಗ್ರಾಮದ ಶಿವಾನಂದ ಎಂಬವರು ಸ್ವಂತಕ್ಕೆ ಮೋಟರ್ ಇಳಿಸಿಕೊಂಡಿದ್ದಾರೆ. ಸಂಬಂಧಪಟ್ಟ ಎಲ್ಲರಿಗೂ ಮನವಿ ಕಳುಹಿಸಿದರೂ ಇದುವರೆಗೂ ಯಾವ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಶೀಘ್ರದಲ್ಲಿಯೇ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಉಸ್ತುವಾರಿ ಸಚಿವರು, ಗ್ರಾಮೀಣ ಸಚಿವರು ಹಾಗೂ ರಕಾರದ ಪ್ರಧಾನ ಕಾರ್ಯದರ್ಶಿ ಕಚೇರಿ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.