×
Ad

ಶೀಲಾದೀಕ್ಷಿತ್‌ಗೆ ‘ಅಲ್ಲಮ್ಮಶ್ರೀ’ ಪ್ರಶಸ್ತಿ

Update: 2016-06-09 22:58 IST

ಬೆಂಗಳೂರು, ಜೂ.9: ಕೊಳದ ಮಠ ವತಿಯಿಂದ ನೀಡುವ ‘ಅಲ್ಲಮ್ಮಶ್ರೀ’ ಪ್ರಶಸ್ತಿಯನ್ನು ದಿಲ್ಲಿಯ ಮಾಜಿ ಮುಖ್ಯ ಮಂತ್ರಿ ಡಾ.ಶೀಲಾದೀಕ್ಷಿತ್‌ರಿಗೆ ನೀಡ ಲಾಗುವುದು ಎಂದು ಮಠದ ಸ್ವಾಮಿ ಡಾ.ಶಾಂತವೀರ ಸ್ವಾಮಿ ತಿಳಿಸಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋ ಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ನಾಡು ಮತ್ತು ನುಡಿಗೆ ಸೇವೆ ಸಲ್ಲಿಸುತ್ತಿರುವವರನ್ನು ಹಾಗೂ ಸಲ್ಲಿಸಿರುವವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು 10 ಸಾವಿರ ನಗದು, ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ ಎಂದು ಹೇಳಿದರು. ಪ್ರಶಸ್ತಿಯನ್ನು ಜೂ.14 ಮತ್ತು 15ರಂದು ನಡೆಯುವ ರೇಣುಕ, ಬಸವ ಮತ್ತು ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮವನ್ನು ಐಟಿಬಿಟಿ ಸಚಿವ ಎಸ್.ಆರ್.ಪಾಟೀಲ್ ಉದ್ಘಾಟಿಸಲಿದ್ದಾರೆ, ಮುರುಘಾಮಠದ ಸ್ವಾಮೀಜಿ, ಮಾಜಿ ಕೇಂದ್ರ ಗೃಹ ಸಚಿವ ಡಾ.ಬೂಟಾಸಿಂಗ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News