ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿಗಳಿಗೆ ಬೇಡಿಕೆ ಕುಸಿತ
ಮಡಿಕೇರಿ, ಜೂ.9: ಮಾವಿನ ಹಣ್ಣು, ಇತರ ತರಕಾರಿ ಬೆಳೆಗಳಿಗೆ ಅತಿಯಾದ ರಾಸಾಯನಿಕ ಕೀಟ ನಾಶಕಗಳ ಬಳಕೆಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗುವ ಭೀತಿ ಎದುರಾಗಿದೆ. ಕಷ್ಟಪಟ್ಟು ಬೆಳೆದ ಮಾವಿನ ಹಣ್ಣು ಹಾಗೂ ತರಕಾರಿಗಳಿಗೆ ಹೆಚ್ಚಿನ ಪ್ರಮಾಣದ ಕೀಟ ನಾಶಕಗಳು ಬಳಕೆಯಾಗುತ್ತಿದ್ದು, ಭಾರತೀಯ ಮಾವಿನಲ್ಲಿ ಗ್ಲೋಬಲ್ ಸ್ಟಾಂಡರ್ಡ್ ಮಿತಿಗೂ ಹೆಚ್ಚಿನ ಕ್ರಿಮಿನಾಶಕದ ಅಂಶವು ಕಂಡುಬಂದಿದೆ ಎನ್ನುವ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ರಫ್ತುದಾರರಿಗೆ ಪರಿಸರ ಸಚಿವಾಲಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸೆ (ಯುಎಇ) ಎಚ್ಚರಿಕೆಯ ನೋಟಿಸ್ ನೀಡಿದೆ. ಭಾರತದಿಂದ ರಫ್ತ್ತಾದ ಮಾವು ಮಾತ್ರವಲ್ಲದೆ ಮೆಣಸಿನಕಾಯಿ, ಮೆಣಸು, ಸೌತೆಕಾಯಿಯಲ್ಲೂ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಕ್ರಿಮಿನಾಶಕ ಅಂಶವು ಪತ್ತೆಯಾಗಿದೆ. ಇದು ಪುನಾರವರ್ತನೆಯಾದರೆ ನಿಷೇಧದ ಭೀತಿ ಎದುರಿಸಬೇಕಾಗುತ್ತದೆ. ಭಾರತೀಯ ಒಟ್ಟು ಮಾವು ರಫ್ತಿನ ಶೇ.70 ಭಾಗ ಯುಎಇ ಪಾಲು ಇದ್ದು, ನಿರ್ಬಂಧ ಹೇರಿದ್ದೆ ಆದಲ್ಲಿ ದೊಡ್ಡ ಪ್ರಮಾಣದ ನಷ್ಟವನ್ನು ಭಾರತದ ಬೆಳೆಗಾರರು ಅನುಭವಿಸಬೇಕಾಗುತ್ತದೆ.
ತೋಟಗಾರಿಕೆ ಇಲಾಖೆಯಿಂದ ಅತಿಯಾದ ಕೀಟನಾಶಕ ಔಷಧಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಹಲವಾರು ಮಾಹಿತಿ ಕಾರ್ಯಾಗಾರಗಳನ್ನು ಗ್ರಾಮೀಣ ಮಟ್ಟದಲ್ಲಿ ಏರ್ಪಡಿಸಿದ್ದು, ಇನ್ನೂ ಕೂಡ ಮಾಹಿತಿ ಕೊಡುವುದರ ಜೊತೆಗೆ ರಾಸಾಯನಿಕ ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಇದಕ್ಕೆಲ್ಲ ಪರಿಹಾರ ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಿಳಿಸಲಾಗಿತ್ತು. ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಕೊಡಗು ಜಿಲ್ಲೆಯ ಮುಖ್ಯ ತೋಟಗಾರಿಕೆ ಬೆಳೆಗೆ ಬೇಕಾದ ವಿವಿಧ ಪರಿಕರಗಳು ಪ್ರಮಾಣ ಬಳಕೆಯಾಗುವ ಸಮಯ ಕೂಡ ತಿಳಿಸಿಕೂಡುತ್ತೇವೆ. ರೈತಬಾಂಧವರು ಸಂದರ್ಭಕ್ಕೆ ತಕ್ಕಂತೆ ಯೋಚಿಸಿ ಒಳ್ಳೆಯ ನಿರ್ಧಾರ ತೆಗೆಯುವಿರೆಂದು ನಂಬುತ್ತೇವೆ. ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ನಿಮ್ಮ ಹಾಗೂ ದೇಶದ ಭವಿಷ್ಯ ಅಡಗಿದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ದೂ.ಸಂಖ್ಯೆ: 08272-228432, ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ), ಮಡಿಕೇರಿ ದೂ: 08272-220555, ಹಾರ್ಟಿ ಕ್ಲಿನಿಕ್ (ಮಾಹಿತಿ ಮತ್ತು ಸಲಹಾ ಕೇಂದ್ರ) ದೂ: 08272-220232, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಸೋಮವಾರಪೇಟೆ ದೂ:08276-281364, ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಪೊನ್ನಂಪೇಟೆ ದೂ:08274-249637 ರವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯ ತಜ್ಞರು ತಿಳಿಸಿದ್ದಾರೆ.