×
Ad

ರಮಝಾನ್, ಬಕ್ರೀದ್ ಹಬ್ಬಗಳ ಸಂದರ್ಭ ಮುನ್ನೆಚ್ಚರಿಕೆಗೆ ಮನವಿ

Update: 2016-06-09 23:14 IST

ಚಿಕ್ಕಮಗಳೂರು, ಜೂ.9: ಚಿಕ್ಕಮಗಳೂರಿನಲ್ಲಿ ರಮಝಾನ್ ಹಾಗೂ ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ ಕಿಡಿಗೇಡಿಗಳು ಒಂದಲ್ಲ ಒಂದು ಕೆಟ್ಟ ಅನಾಹುತ ಮಾಡುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕೆಂದು ಪಿಎಫ್‌ಐ ವಲಯ ಅಧ್ಯಕ್ಷ ಇಮ್ರಾನ್ ನೇತೃತ್ವದಲ್ಲಿ ಪಾಪ್ಯುಲರ್ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹಬ್ಬಗಳ ಸಂದರ್ಭದಲ್ಲಿ ಮಸೀದಿಗೆ ಕಲ್ಲು ಹೊಡೆಯುವುದು, ದರ್ಗಾಗಳಿಗೆ ಹಂದಿಯ ರುಂಡ, ಮುಂಡಗಳನ್ನು ಹಾಕುವುಂತಹ ಕೆಟ್ಟ ಕೆಲಸಗಳನ್ನು ಮಾಡಿ ಊರಿನ ಶಾಂತಿಯನ್ನು ಕದಡುವ ಮೂಲಕ ಮುಸ್ಲಿಮ್‌ರ ಮನಸ್ಸಿಗೆ ನೋವನ್ನುಂಟು ಮಾಡುತ್ತಿದ್ದಾರೆ. ಆದ್ದರಿಂದ ಈ ಹಬ್ಬಗಳ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮನವಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News