2008ರ ಮುಂಬೈ ದಾಳಿ: ಉಲ್ಟಾಹೊಡೆದ ಚೀನಾ

Update: 2016-06-10 05:35 GMT

ಬೀಜಿಂಗ್, ಜೂನ್ 10: ಮುಂಬೈ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಡಾಕ್ಯುಮೆಂಟರಿಯಲ್ಲಿ ಹೇಳಿರುವುದು ಸರಕಾರದ ಅಭಿಪ್ರಾಯವಲ್ಲ ಎಂದು ಚೀನಾದ ವಿದೇಶ ಸಚಿವಾಲಯ ಇಲ್ಲಿ ಸ್ಪಷ್ಟಪಡಿಸಿದೆ. ಅಮೆರಿಕ ನಿರ್ಮಿಸಿದ್ದ ಡಾಕ್ಯುಮೆಂಟರಿಯನ್ನು ಚೈನೀಸ್ ಭಾಷೆಗೆ ಭಾಷಾಂತರಿಸಿ ಪ್ರದರ್ಶಿಸಲಾಯಿತೇ ವಿನಾ ತಮ್ಮ ಭಯೋತ್ಪಾದನೆಯ ಕುರಿತ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಚೀನಾದ ವಿದೇಶಾಂಗ ವಕ್ತಾರ ಹಾಂಗ್ ಲೀ ತಿಳಿಸಿದ್ದಾರೆ.

   ಚೀನಾದ ಸ್ಟೇಟ್ ಟೆಲಿವಿಷನ್ ಸಿಸಿಟಿವಿ 9 ಪ್ರಸಾರಿಸಿದ್ದ ಡಾಕ್ಯುಮೆಂಟರಿಯಲ್ಲಿ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಲಷ್ಕರೆ ತಯ್ಯಿಬ ಹಾಗೂ ಪಾಕಿಸ್ತಾನಿ ಮುಖಂಡರ ಪಾತ್ರವನ್ನು ಉಲ್ಲೇಖಿಸಲಾಗಿತ್ತು. ಇದು ಮಾಧ್ಯಮಗಳ ಗಮನಕ್ಕೆ ಬಂದಾಗ ವ್ಯಾಪಕ ಚರ್ಚೆಗೊಳಗಾಗಿತ್ತು. ಹೀಗಾಗಿ ಚೀನಾ ಇದೀಗ ಸ್ಪಷ್ಟನೆಯೊಂದಿಗೆ ರಂಗಪ್ರವೇಶಿಸಿದೆ.

 ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರಧಾರ ಝಕಿಯುರ್ರಹ್ಮಾನ್ ಲಖ್ವಿ ಬಿಡುಗಡೆ ವಿರುದ್ಧ ವಿಶ್ವಸಂಸ್ಥೆ ಹಸ್ತಕ್ಷೇಪ ನಡೆಸಿದ್ದನ್ನು ಪ್ರಶ್ನಿಸಿ ಚೀನಾ ಈ ಮೊದಲು ಪ್ರತಿಕ್ರಿಯಿಸಿತ್ತು. 2008ರ ಭಯೋತ್ಪಾದಕ ದಾಳಿ ನಡೆಸಿದವರಲ್ಲಿ ಜೀವಸಹಿತ ಬಂಧಿಸಿದ ಅಜ್ಮಲ್ ಕಸಬ್‌ನ ತಪ್ಪೊಪ್ಪಿಗೆ ಸಾಕ್ಷ್ಯ ಕೂಡಾ ಡಾಕ್ಯುಮೆಂಟರಿಯಲ್ಲಿತ್ತು. ಭಯೋತ್ಪಾದನಾ ದಾಳಿಯ ಹಿಂದೆ ಲಷ್ಕರೆ ತಯ್ಯಿಬ ಕಾರ್ಯಾಚರಿಸಿತ್ತು ಎಂದು ಡಾಕ್ಯುಮೆಂಟರಿ ಬಿಂಬಿಸಿತ್ತು. ಕಳೆದ ತಿಂಗಳು ರಾಷ್ಟ್ರಪತಿ ಪ್ರಣವ್‌ಮುಖರ್ಜಿ ಚೀನಾ ಸಂದರ್ಶನಕ್ಕಿಂತ ಒಂದು ವಾರ ಮೊದಲು ಡಾಕ್ಯುಮೆಂಟರಿಯನ್ನು ಪ್ರಸಾರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News