ಏಷ್ಯನ್ ಪವರ್‌ಲಿಫ್ಟಿಂಗ್ ತೀರ್ಥಹಳ್ಳಿಯ ಪ್ರಕೃತಿಗೆ 3 ಚಿನ್ನ
Update: 2016-06-10 23:13 IST
ತೀರ್ಥಹಳ್ಳಿ, ಜೂ. 10: ರಾಜ ಸ್ಥಾನದ ಉದಯಪುರದಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿ ಯನ್‌ಶಿಪ್‌ನ 42 ಕೆ.ಜಿ. ಡೆಡ್‌ಲ್‌ಟಿ ಬೆಂಚ್‌ಕ್ರಸ್ ಸ್ನ್ಯಾಚ್‌ನಲ್ಲಿ ತುಂಗಾ ಪದವಿ ಕಾಲೇಜಿನ ವಿದ್ಯಾರ್ಥಿನಿ ಪ್ರಕೃತಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮೂರು ಬಂಗಾರದ ಪದಕಗಳನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ ಸ ಮಗ್ರ ಪ್ರಶಸ್ತಿ ಕೂಡ ಪ್ರಕೃತಿಯ ಪಾಲಾಗಿದೆ. ಏಷ್ಯಾ ಮಟ್ಟದ ಈ ಚಾಂಪಿಯ ನ್‌ಶಿಪ್‌ನಲ್ಲಿ ಚೀನಾ, ಫಿಲಿಪೈನ್ಸ್, ಶ್ರೀಲಂಕಾ ಮುಂತಾದ ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಪ್ರಕೃತಿ ಇಲ್ಲಿನ ತುಂಗಾ ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕ ಶರತ್ ಶೆಟ್ಟಿ ಮಾರ್ಗದರ್ಶನದಲಿ್ಲ ತರಬೇತಿ ಪಡೆದಿದ್ದು, ಇವರ ಸಾಧನೆಯನ್ನು ತುಂಗಾ ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.