ಶಿವಮೊಗ್ಗ ನಗರದಲ್ಲಿ ದುರಸ್ತಿಯಾಗದ ಬೀದಿ ದೀಪಗಳು
ಶಿವಮೊಗ್ಗ, ಜೂ. 10: ಟೆಂಡರ್ ಪ್ರಕ್ರಿಯೆ ವೇಳೆ ಮಹಾನಗರ ಪಾಲಿಕೆ ಆಡಳಿತ ಮಾಡಿದ ಯಡವಟ್ಟಿನ ನೇರ ಪರಿಣಾಮ ಬೀದಿ ದೀಪ (ಸ್ಟ್ರೀಟ್ ಲೈಟ್ಸ್) ಗಳ ದುರಸ್ತಿಯ ಮೇಲೆ ಬಿದ್ದಿದೆ.
ಹೌದು. ಕೆಲವು ಕಳೆದ ದಿನಗಳಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಬೀದಿ ದೀಪಗಳ ದುರಸ್ತಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಅಕ್ಷರಶಃ ಅಸ್ತವ್ಯಸ್ತವಾಗಿ ಪರಿಣಮಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಬೀದಿ ದೀಪಗಳ ನಿರ್ವಹ ಣೆಯಲ್ಲಾಗುತ್ತಿರುವ ವಿಳಂಬದಿಂದ ಸಾರ್ವ ಜನಿಕರು ಸ್ಥಳೀಯ ಕಾರ್ಪೊರೇಟರ್‌ಗಳು ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಕಾರ್ಪೊರೇಟರ್‌ಗಳ ತಮ್ಮದಲ್ಲದ ತಪ್ಪಿಗೆ ಸಾರ್ವಜನಿಕರ ನಿಂದನೆಗೆ ತುತ್ತಾಗುವಂತಾಗಿದ್ದು, ಪಾಲಿಕೆ ಅಧಿಕಾರಿಗಳ ವಿರುದ್ಧ ಹರಿಹಾ ಯುತ್ತಿದ್ದಾರೆ. ಸಮಸ್ಯೆ ಪರಿ ಹಾರಕ್ಕೆ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಯಡವಟ್ಟು: ಕಳೆದ ಕೆಲ ವರ್ಷ ಗಳಿಂದ ನಗರ ವ್ಯಾಪ್ತಿಯಲ್ಲಿನ ಬೀದಿ ದೀಪಗಳ ನಿರ್ವಹಣೆಯ ಜವಾಬ್ದಾರಿಯನ್ನು ಟೆಂಡರ್ ಮೂಲಕ ಖಾಸಗಿ ವ್ಯಕ್ತಿಗಳಿಗೆ ವಹಿಸಲಾ ಗುತ್ತಿದೆ. 35 ವಾರ್ಡ್‌ಗಳನ್ನು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಿ ಅರ್ಹ ಗುತ್ತಿಗೆದಾರರಿಗೆ ನಿರ್ವ ಹಣೆಯ ಜವಾಬ್ದಾರಿ ಕೊಡಲಾಗುತ್ತಿದೆ. ಆದರೆ ಪ್ರಸ್ತುತ ವರ್ಷ ನಾಲ್ಕು ಪ್ಯಾಕೇಜ್‌ಗಳನ್ನು ಓರ್ವ ಗುತ್ತಿಗೆದಾರನಿಗೆ ನೀಡುವ ನಿರ್ಧಾರವನ್ನು ಪಾಲಿಕೆ ಆಡಳಿತ ಮಾಡಿತ್ತು. ಇದಕ್ಕೆ ಸಂಬಂಧಿಸಿದ ಕಡತವನ್ನು ಜಿಲ್ಲಾಧಿಕಾರಿಯವರ ಅನುಮೋದನೆಗೆ ಕಳುಹಿಸಿ ಕೊಟ್ಟಿತ್ತು. ಓರ್ವ ಗುತ್ತಿಗೆದಾರನಿಗೆ ನಾಲ್ಕು ಪ್ಯಾಕೇಜ್ ಕೊಡುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಇದಕ್ಕೆ ಸಂಬಂಧಿಸಿದ ಕಡತಗಳನ್ನು ಲೋಕೋಪಯೋಗಿ ಇಲಾಖೆಯ ಶಿವಮೊಗ್ಗ-ದಾವಣಗೆರೆ-ಚಿತ್ರದುರ್ಗ ವ್ಯಾಪ್ತಿಯ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಬಾಲಕೃಷ್ಣರವರಿಗೆ ರವಾನಿಸಿ, ಓರ್ವ ಗುತ್ತಿಗೆದಾರನಿಗೆ ನಾಲ್ಕು ಪ್ಯಾಕೇಜ್ ಕೊಡಬಹುದೆ? ಬೇಡವೆ? ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ತಿಳಿಸಿದ್ದರು. ಬಿ.ಎಸ್.ಬಾಲಕೃಷ್ಣರವರ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಎರಡು ಪ್ಯಾಕೇಜ್‌ಗಳಿಗೆ ಮರು ಟೆಂಡರ್ ನಡೆಸುವಂತೆ ಪಾಲಿಕೆ ಆಡಳಿತಕ್ಕೆ ಸೂಚಿಸಿ ಕಡತ ವಾಪಸ್ ಕಳುಹಿಸಿದ್ದರು. ಇದರಿಂದ ಎರಡು ಪ್ಯಾಕೇಜ್ ವ್ಯಾಪ್ತಿಯ ಬಡಾವಣೆಗಳಲ್ಲಿನ ಬೀದಿ ದೀಪಗಳ ದುರಸ್ತಿ ಕಾರ್ಯ ಸಮರ್ಪಕವಾಗಿ ನಡೆಯದಿರಲು ಮುಖ್ಯ ಕಾರಣವಾಗಿದೆ ಎಂದು ಕೆಲ ಕಾರ್ಪೊರೇಟರ್‌ಗಳು ದೂರುತ್ತಾರೆ. ನ
<ಗರದ ಹಲವೆಡೆ ಬೀದಿ ದೀಪಗಳ ನಿರ್ವಹಣೆ ಯಲ್ಲಿ ವ್ಯತ್ಯಯವಾಗು ವಂತಾ ಗಿದೆ. ಕೆಲ ಅಧಿಕಾರಿಗಳು ಮಾಡಿದ ಲೋಪ ದಿಂದ ಸಮಸ್ಯೆ ಸೃಷ್ಟಿಯಾಗಿದ್ದು, ಇಷ್ಟರಲ್ಲಿಯೇ ಸಮಸ್ಯೆ ಪರಿಹಾರ ವಾಗಲಿದೆ. ಟೆಂಡರ್ ಪ್ರಕ್ರಿಯೆ ಪೂರ್ಣ ಗೊಳ್ಳುವವರೆಗೆ ಬೀದಿದೀಪಗಳ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡು ವಂತೆಯೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿ
ಅನುಮೋದಿಸದಂತೆ ಡಿಸಿಗೆ ವರದಿ ನೀಡಿದ್ದ ಪಿಡಬ್ಲ್ಯೂಡಿ
ಬಿ
ೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದ ನಾಲ್ಕು ಪ್ಯಾಕೇಜ್‌ಗಳನ್ನು ಓರ್ವ ಗುತ್ತಿಗೆದಾರನಿಗೆ ನೀಡುವ ಮಹಾನಗರ ಪಾಲಿಕೆ ಆಡಳಿತದ ನಿರ್ಧಾರದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಪಿಡಬ್ಲ್ಯೂಡಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಬಾಲಕೃಷ್ಣರವರಿಗೆ ಸೂಚಿಸಿದ್ದರು. ಟೆಂಡರ್ ಪ್ರಕ್ರಿಯೆ ಹಾಗೂ ಕಡತ ಪರಿಶೀಲನೆ ನಡೆಸಿದ ಬಿ.ಎಸ್.ಬಾಲಕೃಷ್ಣ ಜಿಲ್ಲಾಡಳಿತಕ್ಕೆ ಈಗಾಗಲೇ ವರದಿ ಸಲ್ಲಿಸಿದ್ದಾರೆ