ಬಾಬಾಗೆ ‘ಪರಮಾನಂದ’ ನೀಡುತ್ತಿದ್ದ ಅಶ್ಲೀಲ ವೀಡಿಯೊಗಳ ವಶ

Update: 2016-06-11 05:54 GMT

ಬಾರಾಬಂಕಿ,ಜೂನ್ 11: ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಪರಮಾನಂದರ ಚಿತ್ರಕೂಟ ಆಶ್ರಮಕ್ಕೆ ಪೊಲೀಸರು ದಾಳಿ ನಡೆಸಿ ಅಶ್ಲೀಲ ವೀಡಿಯೊವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಇಟ್ಟು ಕೊಂಡು ಆತ ಮಹಿಳೆಯರನ್ನು ಬ್ಲಾಕ್‌ಮೈಲ್ ಮಾಡುತ್ತಿದ್ದರು ಎನ್ನಲಾಗಿದೆ.

 ಬಾಬಾರ ಬಾರಬಂಕಿ ಮತ್ತು ಚಿತ್ರಕೂಟ ಇವೆರಡೂ ಕಡೆಯ ಆಶ್ರಮಗಳಲ್ಲಿ ಪೊಲೀಸರು ಅಸಲಿ ಸಿಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ತೋರಿಸಿ ಬೆದರಿಕೆ ಹಾಕಿ ಪರಮಾನಂದರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದುದು ಮಾತ್ರವಲ್ಲ ದೊಡ್ಡ ಮೊತ್ತದ ಹಣವನ್ನೂ ವಸೂಲು ಮಾಡುತ್ತಿದ್ದರು ಎಂದು ಆರೋಪಿಸಲಾಗಿತ್ತು, ಪೊಲೀಸರು ಆಶ್ರಮದಿಂದ ಅಶ್ಲೀಲ ಸೀಡಿ, ಅಶ್ಲೀಲ ಮ್ಯಾಗಝಿನ್ ಮತ್ತು ಅಶ್ಲೀಲ ಪುಸ್ತಕಗಳನ್ನೂ ವಶಪಡಿಸಿಕೊಂಡಿದ್ದಾರೆ. ನೂರು ಮಹಿಳೆಯರನ್ನು ಲೈಂಗಿಕ ದುರ್ಬಳಕೆ ಮಾಡಿರುವ ಆರೋಪವನ್ನು ಬಾಬಾ ಎದುರಿಸುತ್ತಿದ್ದಾರೆ. ಮಹಿಳೆಯರಿಗೆ ಸಂತಾನ ಭಾಗ್ಯ ಕೊಡಿಸುವೆ ಎಂದು ಹೇಳಿ ಬಳಸುತ್ತಿದ್ದ ಬಾಬಾನನ್ನು ಕೆಲವು ದಿವಸಗಳ ಹಿಂದೆ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News