ಜೆಡಿಎಸ್ ನ ಎಂಟು ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ಮತದಾನ

Update: 2016-06-11 09:49 GMT

ಬೆಂಗಳೂರು, ಜೂ.11: ರಾಜ್ಯಸಭೆಗೆ ಜೆಡಿಎಸ್‌ನ ಎಂಟು ಮಂದಿ ಬಂಡಾಯ ಶಾಸಕರು ಪಕ್ಷದ ವಿಪ್ ನ್ನು ಉಲ್ಲಂಘಿಸಿ  ಮತ ಚಲಾಯಿಸಿದ್ದಾರೆ.

ಜಾಮರಾಜಪೇಟೆ ಶಾಸಕ ಜಮೀರ‍್ ಅಹ್ಮದ್‌ ಖಾನ್‌ ನೇತೃತ್ವದಲ್ಲಿ ಬಿಗು ಪೊಲೀಸ್‌ ಭದ್ರತೆಯಲ್ಲಿ ಮತ ಚಲಾಯಿಸಲು ವಿಧಾನ ಸೌಧದ ಮತಗಟ್ಟಗೆ ಆಗಮಿಸಿದ ಶಾಸಕರು ಜೆಡಿಎಸ್ ಏಜೆಂಟರಿಗೆ ಮತಪತ್ರವನ್ನು ತೋರಿಸಿ ಮತ ಚಲಾಯಿಸಿದ್ದಾರೆ.
ಜೆಡಿಎಸ್‌ನ ಅಭ್ಯರ್ಥಿ ಬಿ.ಎಂ. ಫಾರೂಕ್‌ ಪರ ಈಗಾಗಲೇ ಜೆಡಿಎಸ್‌ನ 32  ಶಾಸಕರು ಮತ ಚಲಾಯಿಸಿದ್ದಾರೆ. ಎಂಟು ಮಂದಿ ಬಂಡಾಯ ಶಾಸಕರು ಯಾರಿಗೆ   ಮತ ಚಲಾಯಿಸಿರುವುದಾಗಿ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News