ಕಾಸರಗೋಡು: ಕಂದಾಯ ಇಲಾಖಾ ಕಚೇರಿ ವಸತಿಗೃಹ ಉದ್ಘಾಟನೆ
Update: 2016-06-11 23:37 IST
ಪ್ರಭಾಕರನ್ ಆಯೋಗದ ಶಿಫಾರಸಿನಂತೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಡಿ ನಿರ್ಮಿಸಿದ ಕಂದಾಯ ಇಲಾಖಾ ಕಚೇರಿ ವಸತಿಗೃಹವನ್ನು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಶನಿವಾರ ಉದ್ಘಾಟಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಇ.ದೇವದಾಸನ್, ಕಾಞಂಗಾಡ್ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್, ಉಪ ಜಿಲ್ಲಾಧಿಕಾರಿ ಮೃಣ್ಮಾಯಿ ಜೋಷಿ, ಹೆಚ್ಚುವರಿ ದಂಡಾಧಿಕಾರಿ ವಿ.ಪಿ. ಮುರಳೀಧರನ್, ಆರ್. ಮಹಾದೇವ ಕುಮಾರ್, ಕೆ.ಅಂಬುಜಾಕ್ಷನ್, ಎಸ್.ಕೆ. ಜಯಲಕ್ಷ್ಮೀ, ಕೆ. ಕುಞಾಂಬು ನಾಯರ್ ಮತ್ತಿತರರು ಉಪಸ್ಥಿತರಿದ್ದರು.