ಹಾಸನ : ಗಿಡ ನೆಡುವ ಮೂಲಕ ಪದಗ್ರಹಣ

Update: 2016-06-12 10:49 GMT

ಹಾಸನ ಜೂ.12: ಸ್ಪಂದನ ವೇದಿಕೆ ಪದಾಧಿಕಾರಿಗಳು ರಸ್ತೆ ಬದಿ ಗಿಡ ನೆಡುವ ಮೂಲಕ ವಿನೂತನವಾಗಿ ಪದಗ್ರಹಣ ಮಾಡಿದರು.

ನಗರದ ಕುವೆಂಪು ರಸ್ತೆಯಲ್ಲಿ ಗಿಡಗಳನ್ನು ನಟ್ಟು ಸ್ಪಂದನ ವೇದಿಕೆಗೆ ನೂತನವಾಗಿ ಆಯ್ಕೆಗೊಂಡ ಕಾರ್ಯದರ್ಶಿ ಪುಟ್ಟಮ್ಮ, ಗೌರವ ಕಾರ್ಯದರ್ಶಿ ಸುಧಾ ಮೂರ್ತಿ ಪದಗ್ರಹಣ ಮಾಡಿದರು.

ಸ್ಪಂದನ ವೇದಿಕೆ ಮತ್ತು ವಾಸವಿ ಯೋಗ ಸಾಧಕರ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪದಗ್ರಹಣ ಕಾರ್ಯಕ್ರಮವನ್ನು ರಸ್ತೆ ಬದಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ ತಿಳಿಸಿದ್ದಾರೆ.ಭೂಮಿ ಮೇಲೆ ಹೆಚ್ಚಿನ ಗಿಡ-ಮರ ಇದ್ದರೇ ಮಾತ್ರ ನಾವು ಉತ್ತಮವಾಗಿ ಉಸಿರಾಡಬಹುದು ಎಂದರು.

ಪ್ರಸ್ತುತದಲ್ಲಿ ಬಿಸಿಲಿನ ತಾಪಮಾನವನ್ನು ಎದುರಿಸಬೇಕಾಗಿದೆ. ಇದಕ್ಕೆ ಮೂಲ ಕಾರಣ ಮನುಷ್ಯ ದುರಾಸೆಯಿಂದ ಮರಗಳನ್ನು ನಾಶ ಮಾಡುತ್ತಿದ್ದಾನೆ. ಆದರೇ ಗಿಡ ನೆಡುವ ಕೆಲಸ ಮಾಡುತ್ತಿರುವುದು ತೀರ ಕಡಿಮೆಯಾಗಿದೆ ಎಂದು ಆತಂಕವ್ಯಕ್ತಪಡಿಸಿದರು. ಪ್ರತಿ ಮನೆಯ ಅಂಗಳದಲ್ಲಿ ಸಸಿಯನ್ನು ನೆಟ್ಟು ಪೋಷಣೆ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಗೇ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಪಾಠ ಬೋಧಿಸುವುದರ ಜೊತೆಯಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವಂತೆ ಸಲಹೆ ನೀಡಿದರು. ಬೆಳೆಯುತ್ತಿರುವ ಜನಸಂಖ್ಯೆ ಒಂದು ಕಡೆಯಾದರೇ, ಅದರಂತೆ ಗಿಡವನ್ನು ನೆಡದೆ ಕೇವಲ ಅವನ ಸ್ವಾರ್ಥ ಹೆಚ್ಚಾಗಿ ಪರಿಸರ ನಾಶವಾಗುತ್ತಿದೆ ಎಂದರು. ಪರಿಸರ ಸಂರಕ್ಷಣೆ ಎಂಬುದು ಕೇವಲ ಒಬ್ಬರಲ್ಲಿ ಆಸಕ್ತಿ ಬಾರದೆ ಪ್ರತಿಯೊಬ್ಬರ ಸಾಮೂಹಿಕ ಹೊಣೆಗಾರಿಕೆಯ ಮನೋಭಾವ ಬರಬೇಕು ಎಂದು ಸಲಹೆ ನೀಡಿದರು.

ಸುರೇಶ್ :

     ಯೋಗಾ ಶಿಕ್ಷರಾದ ಸುರೇಶ್ ಪ್ರಜಾಪತಿ ಮಾತನಾಡಿ, ಗಿಡ ನೆಡುವ ಕಾಳಜಿ ಜೊತೆ ಪೋಷಣೆ ಮಾಡುವ ಹೊಣೆಗಾರಿಕೆ ಬೆಳೆಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಗಿಡ ಹಾಕಿ ವಾರಕ್ಕೆ ಎರಡು ಬಾರಿಯಾದರೂ ನೀರು ಹಾಕುವ ಮೂಲಕ ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ಕಲಾವತಿ :

   ಸ್ಪಂದನ ವೇಧಿಕೆ ಅಧ್ಯಕ್ಷರಾದ ಕಲಾವತಿ ನಿರೂಪಣೆ ಮಾಡಿ ಪ್ರಾಸ್ತವಿಕ ನುಡಿಯಲ್ಲಿ ಮಾತನಾಡುತ್ತಾ, ವಿಶ್ವ ಪರಿಸರ ದಿನದ ಅಂಗವಾಗಿ ವಿನೂತನ ರೀತಿ ನಮ್ಮ ವೇಧಿಕೆಯ ಪದಗ್ರಹಣವನ್ನು ಸಸಿ ಕೊಡುವುದರ ಮೂಲಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಪರಿಸರ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.  

    ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕ್ ಅಧ್ಯಕ್ಷ ಗಂಜಲಗೂಡು ಗೋಪಾಲ್, ಶಿಕ್ಷಕರ ಸಂಘದ ಚೈತ್ರಾ ಮಂಜೇಗೌಡ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News