ಗುಣ ಮಟ್ಟದ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಕೆ.ಎಸ್. ಜಯಂತ್ ಕರೆ

Update: 2016-06-12 10:57 GMT

 ಹಾಸನ: ಮನಸ್ಸಿನಲ್ಲಿ ಒಂದು ಯೋಜನೆ ಇದ್ದು, ಉತ್ತಮವಾದ ಕಾಲೇಜ್ ಆಯ್ಕೆ ಮಾಡಿಕೊಂಡು ಗುಣ ಮಟ್ಟದ ಶಿಕ್ಷಣ ಪಡೆಯುವಂತೆ ಎಂಸಿಇ ಕಾಲೇಜಿನ ಪ್ರಾಂಶುಪಾಲರಾದ ಕೆ.ಎಸ್. ಜಯಂತ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

      ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ರೋಟರಿ ಕ್ಲಬ್, ಬೇಸ್ ಎಜುಕೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಹಾಗೂ ಎಂಸಿಇ ಕಾಲೇಜ್ ಇವರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಿಇಟಿ ಕೌನ್ಸೆಲಿಂಗ್ ಕುರಿತು ವಿದ್ಯಾರ್ಥಿಗಳಿಗೆ ಉಚಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿ, ಪ್ರಸ್ತುತದಲ್ಲಿ ತಂತ್ರಜ್ಞಾನ ಎಂಬುದು ವೇಗವಾಗಿ ಬೆಳೆಯುತ್ತಿದೆ. ಪ್ರಪಂಚದ ವಿಚಾರವನ್ನೆಲ್ಲಾ ಕುಳಿತಲ್ಲೆ ಕಂಪ್ಯೂಟರ್ ಮತ್ತು ಮೊಬೈಲ್‌ನಲ್ಲೆ ಮಾಹಿತಿ ಪಡೆಯಬಹುದು. ವಿದ್ಯಾರ್ಥಿಗಳು ಇಂಜಿನಿಯರ್ ಆಯ್ಕೆ ಮಾಡಿಕೊಳ್ಳಬೇಕಾದರೇ ಮೊದಲು ಗುಣಮಟ್ಟದ ಶಿಕ್ಷಣದ ಬಗ್ಗೆ ತಿಳಿದುಕೊಳ್ಳಬೇಕು. ಕಾಲೇಜಿನ ಬಗ್ಗೆ ತಿಳಿಯುವ ಒಂದು ಯೋಜನೆ ಮಾಡಿಕೊಂಡಿರೇ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಿಗೆ ಪೂರಕವಾದ ಸ್ವಾಯತ್ತತೆ ಕಾಲೇಜಿನಲ್ಲಿ ಇರಬೇಕು. ವಿದ್ಯಾರ್ಥಿಗಳ ಕಲಿಕೆಗೆ ಪಠ್ಯದಂತಹವು ಪೂರಕ ಹಾಗೂ ಹೆಚ್ಚು ಅನುಕೂಲ ಎಂದು ಸಲಹೆ ನೀಡಿದರು. ಪಠ್ಯ ಜೊತೆಗೆ ವೃತ್ತಿಗೆ ಪೂರಕವಾದ ಕೌಶಲ್ಯವನ್ನು ನಮ್ಮ ಕಾಲೇಜಿನಲ್ಲಿ ಬೆಳೆಸಲಾಗುತ್ತಿದೆ ಎಂದು ಹೇಳಿದರು. ಆದರೇ ಸ್ವಾಯತ್ತತೆ ಹೊಂದದೆ ಇರದ ಅನೇಕ ಖಾಸಗಿ ಕಾಲೇಜುಗಳು ಒಂದು ಪಠ್ಯ ಕ್ರಮಕ್ಕೆ ಸೀಮಿತವಾಗಿರುತ್ತದೆ ಎಂದು ದೂರಿದ ಅವರು ಇಂತಹ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಬೆಳೆಯಲು ಸಲ್ಪ ಕಷ್ವಾಗಬಹುದು ಎಂದು ತಿಳಿಮಾತು ಹೇಳಿದರು.

     ಇಂದಿನ ತಂತ್ರಜ್ಞಾನದಲ್ಲಿ ಹೊಸ ಹೊಸ ಅವಿಷ್ಕಾರವನ್ನು ಕಾಣಬಹುದು. ಇಂಜಿಯರಿಂಗ್ ಕ್ಷೇತ್ರದ ಬಗ್ಗೆ ಅರಿತು ಬಂದರೇ ಉತ್ತಮ ಎಂದರು. ಹೊಸದಾಗಿ ಬಂದಿರುವ ತಂತ್ರಜ್ಞಾನ ಕಲಿತರೇ ನಾನಾ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಮನೆ ಬಾಗಿಲಿಗೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ದೈರ್ಯ ತುಂಬಿದರು. ವಿಶ್ವೇಶ್ವರಯ್ಯ ಟೆಕ್ನಾಲಜಿ ವ್ಯಾಪ್ತಿಯಲ್ಲಿ 212 ಇಂಇನಿಯರಿಂಗ್ ಕಾಲೇಜುಗಳು ಬರುತ್ತದೆ. 17 ಕಾಲೇಜುಗಳಲ್ಲಿ ಸ್ವಾಯತ್ತತೆ ಹೊಂದಿದೆ ಎಂದು ಹೇಳಿದರು.

ಶ್ವೇತಾ ಶಿವಪ್ರಸಾದ್:

    ಇದೆ ವೇಳೆ ಶ್ವೇತಾ ಶಿವಪ್ರಸಾದ್ ಪ್ರೊಜೆಕ್ಟರ್ ಮೂಲಕ ವಿಡೀಯೊ ಪ್ರದರ್ಶಿಸಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಾ ವಿವರಿಸಿದರು. ವಿದ್ಯಾರ್ಥಿಗಳಲ್ಲಿ ಕೇವಲ ಆಸಕ್ತಿ ಇದ್ದರೇ ಸಾಲದು. ಅವರಲ್ಲಿ ಕ್ರಿಯಾಶೀಲತೆ ಹಾಗೂ ಗುರಿ ಇರಬೇಕು ಎಂದರು. ಯಾವುದೇ ಒಂದು ಕೆಲಸದಲ್ಲಿ ಶ್ರದ್ಧೆ ಇದ್ದರೇ ಮಾತ್ರ ಗುರಿ ತಲುಪಲು ಸಾಧ್ಯವೆಂದು ಇದೆ ವೇಳೆ ಕರೆ ನೀಡಿದರು.

     ಕಾರ್ಯಾಗಾರದಲ್ಲಿ 8 ರಿಂದ 10ನೇ ತರಗತಿ ಮತ್ತು ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.

     ಇದೆ ವೇಳೆ ಕಾರ್ಯಕ್ರಮದ ಆಯೋಜಕರಾದ ಎಂ.ಕೆ. ರವಿಶಂಕರ್, ರೋಟರಿ ಕ್ಲಬ್‌ನ ಚಿದಾನಂದ್, ಸತೀಶ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News