ಲೂಟಿಕೋರರ ಖಜಾನೆಯಾದ ಯಗಚಿ ಪುರ್ನರ್‌ವಸತಿ ಕೇಂದ್ರ: ನಿವಾಸಿಗಳು ಆಕ್ರೋಶ

Update: 2016-06-12 11:18 GMT

ಬೇಲೂರು: ಯಗಚಿ ಜಲಾಶಯಕ್ಕೆ ತಮ್ಮಅಮೂಲ್ಯ ಭೂಮಿ ಮತ್ತು ಮನೆ-ಮಠ ಬಿಟ್ಟು ಹೊರ ಬಂದ ಜನರಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಇವರ ಹೆಸರು ಹೇಳಿಕೊಂಡು ಹಣ ಮಾಡುತ್ತಿದ್ದಾರೆ ಎಂದು ಸ್ಥಳೀಯ ಯಗಚಿ ಜಲಾಶಯ ಪುರ್ನರ್ ವಸತಿ ಕೇಂದ್ರದ ನಿವಾಸಿಗಳು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

1984 ರಲ್ಲಿ ಯಗಚಿ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸುಮಾರು 12 ಗ್ರಾಮಗಳು ಮುಳುಗಡೆಯಾದವು, ಅದರಲ್ಲಿ ಪ್ರಮುಖವಾಗಿ ಡಣನಾಯ್ಕಹಳ್ಳಿ. ಕನಾಯ್ಕನಹಳ್ಳಿ, ಕೊರಟಿಕೆರೆ ಇನ್ನು ಮುಂತಾದ ಗ್ರಾಮದ ಜನರಿಗೆ ಸರಕಾರ ತಾಲ್ಲೂಕಿನ ವಿವಿಧ ಭಾಗದಲ್ಲಿ ಪುರ್ನರ್‌ವಸತಿ ಕೇಂದ್ರ ಸ್ಥಾಪನೆ ಮಾಡಿದೆ ಹೊರತು ಅವರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲಾಗಿದೆ ಎಂದು ದೂರಿದರು.

 ಯಗಚಿ ಅಣ್ಣೇಕಟ್ಟು ನಿರ್ಮಿಸುವಲ್ಲಿ ಮುಳುಗಡೆಯಾದ ಡಣನಾಯ್ಕನಹಳ್ಳಿ, ಕೊರಟಿಕೆರೆ ಗ್ರಾಮದ ಸುಮಾರು 32 ನಿರಾಶ್ರಿತರಿಗೆ ತಾಲ್ಲೂಕಿನ ಹೆಬ್ಬಾಳು ಗ್ರಾಮದಿಂದ ಎರಡು ಕೀಮೀ ದೂರದ ಕಾಡು ಪ್ರದೇಶದಲ್ಲಿ ಪುರ್ನರ್ ವಸತಿಕೇಂದ್ರ ನಿರ್ಮಾಣ ಮಾಡಿದೆ ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಿಲ್ಲ, ಇತ್ತೀಚಿಗೆ ಚೆರಂಡಿ ಕಾಮಾಗಾರಿ ಮತ್ತು ದೇವಾಲಯದ ಕಾಮಾಗಾರಿ ತೀವ್ರ ಕಳಪೆಯಾಗಿದೆ ಎಂದು ಆರೋಪಿಸಿದ ಅವರು ಇಲ್ಲಿನ 32 ನಿರಾಶ್ರಿತರಿಗೆ ನಿವೇಶನ ನೀಡಿ ಹಕ್ಕು ಪತ್ರ ನೀಡಿದೆ, ಇಲ್ಲಿ 12 ದಲಿತ ಕುಟುಂಬಗಳು ವಾಸವಾಗಿದ್ದು, ಅವರಿಗೆ ಕುಡಿಯುವ ನೀರು, ಅಗತ್ಯ ರಸ್ತೆ, ಚೆರಂಡಿ, ನಿರ್ಮಿಸುವಲ್ಲಿ ಸರ್ಕಾರ ಜನಪ್ರತಿನಧಿಗಳು ಗುತ್ತಿಗೆದಾರರು ಹಣಕ್ಕಾಗಿ ನಮ್ಮನ್ನು ಬಳಕೆ ಮಾಡಿಕೊಂಡಿದ್ಧಾರೆ ಎಂದು ತಿಳಿಸಿದರು.

ವಿಶೇಷವೆಂದರೆ ಪುರ್ನರ್‌ವಸತಿ ಕೇಂದ್ರದ ಖಾಲಿ ನಿವೇಶನಗಳನ್ನು ಜಮೀನು ಮಾಡಿಕೊಂಡಿದ್ದಾರೆ, ದಿನ ನಿತ್ಯ ಕುಡಿಯುವ ನೀರಿಗೆ ಮೈಲಿಗಟ್ಟಲೇ ತಿರುಗುವ ಹೀನ ಪರಿಸ್ಥಿತಿಯಾಗಿದೆ, ಕುಡಿಯುವ ನೀರಿಗಾಗಿ ಇಲ್ಲಿ 10 ಕ್ಕೂ ಹೆಚ್ಚು ಕೊಳವೆಬಾವಿ ತೆಗೆಸಿದ್ದಾರೆ, ನೀರು ಬಂದಿಲ್ಲ, ಮಿನಿ ಟ್ಯಾಂಕ್ ದುಸ್ಥಿತಿಯಲ್ಲಿದೆ.

ಯಗಚಿ ಜಲಾಶಯಕ್ಕೆ ನಮ್ಮ ಭೂಮಿ ಮನೆಗಳನ್ನು ನೀಡಿದಕಾರಣ ಇಂದು ನಮಗೆ ಮನೆ ಇಲ್ಲದೆ ಗುಡಿಸಲ್ಲಿ ವಾಸ ಮಾಡುವಂತಾಗಿದೆ.

 ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುವಮತಾಗಿದೆ. ಇಲ್ಲಿಗೆ ಬಂದ ಅಧಿಕಾರಿಗಳು ನಮಗೆ ಹೊಸ-ಹೋಸ ಭರವಸೆ ನೀಡುತ್ತಾರೆ, ಹಣ ಮಾಡಿಕೊಂಡು ಇತ್ತ ಕಡೆ ಮುಖ ಮಾಡುವದಿಲ್ಲ ಎಂು ತಮ್ಮ ಆಳಲು ಹೇಳಿಕೊಂಡರು.

 ಪುರ್ನರ್ ವಸತಿಕೇಂದ್ರದ ಹೆಸರು ಬಳಕೆ ಮಾಡಿಕೊಂಡು ಇಲ್ಲಿಯತನಕ ಹಣ ಮಾಡಲು ಯತ್ನಿಸಿ ಗುತ್ತಿದೆದಾರರು ಮತ್ತು ಅಧಿಕಾರಿಗಳ ವಿರುದ್ದ ಸೂಕ್ತ ತನಿಖೆಯಾಗಬೇಕು ಇಲ್ಲವಾದರೆ ಯಗಚಿ ನೀರವಾರಿ ಇಲಾಖೆ ಮುಂದೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ವೈ.ಎನ್.ರುದ್ರೇಶಗೌಡ ಶಾಸಕರು ಬೇಲೂರು ವಿಧಾನಸಭಾ ಕ್ಷೇತ್ರ

ಯಗಚಿ ಅಣ್ಣೇಕಟ್ಟು ನಿರ್ಮಾಣದ ಸಂದರ್ಭದಲ್ಲಿ ತಮ್ಮ ಅಸ್ತಿ ಮನೆ ನೀಡಿದ ಜನರಿಗೆ ಪುರ್ನರ್‌ವಸತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ, ಅಲ್ಲಿ ಸಕಲ ಮೂಲಭೂತ ಸೌಲಭ್ಯ ಇರಬೇಕು ಎಂಬ ನಿಯಮವಿದೆ, ಅಂತಯೇ ಎಲ್ಲ ಸೌಲಭ್ಯ ನೀಡಲಾಗಿದೆ ಅದರೆ ಜನರು ಇನ್ನು ಕೂಡ ಕುಡಿಯುವ ನೀರು ಮತ್ತು ಹತ್ತು ಹಲವು ಸೌಲಭ್ಯವಿಲ್ಲದ ಕಾರಣ ನಾವುಗಳು ಹೆಬ್ಬಾಳು ಪುರ್ನರ್ ವಸತಿ ಕೇಂದ್ರಕ್ಕೆ ಖುದ್ದು ಸ್ಥಳ ಪರಿಶೀಲನೆ ನಡೆಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News