ರಸ್ತೆಗೆ ಉರುಳಿದ ಲಾರಿ
Update: 2016-06-12 23:14 IST
ಮೂಡಿಗೆರೆ, ಜೂ.12: ಕಟ್ಟಿಗೆ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ರಸ್ತೆ ಬದಿ ಉರುಳಿ ಬಿದ್ದ ಘಟನೆ ಪಟ್ಟಣದ ಹೊರ ವಲಯದ ಕೊಲ್ಲೀಬೈಲ್ ಕ್ರಾಸ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೂಡಿಗೆರೆಯಿಂದ ಚಿಕ್ಕಮಗಳೂರು ಮಾರ್ಗವಾಗಿ ಕಟ್ಟಿಗೆ ತುಂಬಿಕೊಂಡು ತೆರಳುತ್ತಿದ್ದ ಲಾರಿಯು ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ವೇಳೆ ರಸ್ತೆ ಬದಿಗೆ ಉರುಳಿ ತಲೆ ಕೆಳಗಾಗಿ ಬಿದ್ದಿದೆ. ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಕ್ರ ಮೇಲೆದ್ದು ನಿಂತಿದೆ. ಘಟನೆ ವೇಳೆ ಚಾಲಕ ಮತ್ತು ನಿರ್ವಾಹಕರು ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.