ಲಾರಿ-ಕಾರು ಢಿಕ್ಕಿ: ಐವರಿಗೆ ಗಾಯ
Update: 2016-06-12 23:15 IST
ಮಡಿಕೇರಿ, ಜೂ.12: ಲಾರಿ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಐವರು ಗಾಯಗೊಂಡಿರುವ ಘಟನೆ ರಾಜ್ಯ ಹೆದ್ದಾರಿಯ ಸಿಂಕೋನ ಬಳಿ ನಡೆದಿದೆ. ಮಡಿಕೇರಿಗೆ ಬಂದಿದ್ದ ಪ್ರವಾಸಿಗರು ಬೆಂಗಳೂರಿಗೆ ಮರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಗಾಯಗೊಂಡ ಐವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.