×
Ad

ಸಾಮರಸ್ಯಮಯ ಸಮಾಜ ರಮಝಾನ್ ಆಚರಣೆಯ ವಿಶೇಷ

Update: 2016-06-12 23:18 IST

ಸೊರಬ, ಜೂ.12: ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು ರಮರಾನ್ ಆಚರಣೆಯ ವಿಶೇಷತೆಯಾಗಿದೆ. ಎಲ್ಲರಂತೆ ಬಡವರೂ ರಮಝಾನ್ ಹಬ್ಬವನ್ನು ಎಲ್ಲರಂತೆ ಸಂತೋಷದಿಂದ ಆಚರಿಸಬೇಕನ್ನುವ ಉದ್ದೇಶದಿಂದ ರಮಝಾನ್ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ವಕೀಲ ಸೈಯದ್ ಅಬ್ದುಲ್ ರೆಹಮಾನ್ ಹೇಳಿದರು.

ರವಿವಾರ ಪಟ್ಟಣದ ದಾರುಸ್ಸಲಾಂ ಶಾದಿ ಮಹಲ್‌ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸೊರಬ ಘಟಕದ ವತಿಯಿಂದ ವಿಧವೆಯರು ಮತ್ತು ಬಡವರಿಗೆ ರಮಝಾನ್ ಆಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ರಮಝಾನ್ ಕಿಟ್ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಉಳ್ಳವರು ಕೆಳ ಸ್ಥರದಲ್ಲಿ ಬದುಕುತ್ತಿರುವವರಿಗೆ ಸರ್ವ ರೀತಿಯ ಸಹಾಯ ನೀಡುವ ಮೂಲಕ ರಮಝಾನ್ ಆಚರಣೆಯನ್ನು ಸಮಾನ ಭಾವದಿಂದ ಆಚರಿಸಬೇಕೆನ್ನುವ ಮುಖ್ಯ ಉದ್ದೇಶದಿಂದ ರಮಝಾನ್ ಕಿಟ್ ವಿತರಿಸಲಾಗುತ್ತಿದೆ ಎಂದರು.

  

ಜಮಾ-ಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಘಟಕದ ಅಧ್ಯಕ್ಷ ಎಂ. ಇನಾಯತುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ವಾಸವಿರುವ 40 ಬಡ ಕುಟುಂಬಗಳನ್ನು ಗುರುತಿಸಿ ಪ್ರತಿ ಕುಟುಂಬಕ್ಕೆ 1,800 ರೂ. ಮೊತ್ತದ ಆಹಾರ ಪದಾರ್ಥಗಳನ್ನು ಹೊಂದಿರುವ ರಮಝಾನ್ ಕಿಟ್ ವಿತರಿಸಲಾಗುತ್ತಿದೆ. ಸನ್ಮಾರ್ಗದಲ್ಲಿ ಸಾಗಲು ಧರ್ಮಾಚರಣೆ ಹಾಗೂ ದೇವರ ಭಯ-ಭೀತಿಯನ್ನು ಮೈಗೂಡಿಸಿಕೊಂಡಾಗ ಸಮಾಜದ ಸ್ವಾಸ್ಥ ಕಾಪಾಡಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಎನ್. ನೂರ್ ಅಹ್ಮದ್, ಜಮಾ-ಅತೆ ಇಸ್ಲಾಮಿ ಹಿಂದ್‌ನ ಎಂ. ಬಷೀರ್ ಅಹ್ಮದ್, ಪಿ. ಅಶ್ಫಾಕ್ ಅಹ್ಮದ್, ಜಾವಿದ್ ಇಕ್ಬಾಲ್, ಅಫ್ಝಲ್ ಹನೀಫ್, ನಸ್ರುಲ್ಲಾ ಖಾನ್, ಅಬ್ದುಲ್ ರಹೀಂ ಸಾಬ್, ಮುಹಮ್ಮದ್ ಯಾಸೀನ್, ಫೈಝುಲ್ಲಾ, ಆರ್. ಅಬ್ದುಲ್ ರಷೀದ್, ಸುಜಯತುಲ್ಲಾ, ಯು.ಎಸ್. ಬುರ್ಹಾನ್, ಯು. ಫಯಾಝ್ ಅಹ್ಮದ್, ಮೆಹಬೂಬ್ ಸಾಬ್, ಝಹೀರುದ್ದೀನ್, ಸಂಘಟನೆಯ ಮಹಿಳಾ ಘಟಕದ ಸ್ಥಾನೀಯ ಅಧ್ಯಕ್ಷೆ ಆಬೀದಾ ಬೇಗಂ, ಉಮ್ರಾಬಾನು, ಮುನೀರಾ ಬೇಗಂ, ಎಚ್.ಆರ್.ಎಸ್. ಸಂಚಾಲಕ ಮುಹಮ್ಮದ್ ಶಾಬುದ್ದೀನ್, ಅಬ್ದುಲ್ ಬಾಸಿತ್, ಝೈನುಲ್ಲಾಬಿದ್ದೀನ್, ರಝಾಕ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News