ಮುದ್ರಕರ ಮನೋಸ್ಥಿತಿ ಬದಲಾಗಬೇಕು: ಮಾಲತಿ
ಸಾಗರ, ಜೂ.12: ಪ್ರಕಾಶಕರು ಕಥೆ, ಕಾದಂಬರಿ ಮುದ್ರಿಸುವಷ್ಟು ಆಸಕ್ತಿಯನ್ನು ಕವನ, ನಾಟಕ ಮುದ್ರಿಸಲು ತೋರಿಸುತ್ತಿಲ್ಲ ಎಂದು ಲೇಖಕಿ ಎಸ್. ಮಾಲತಿ ಹೇಳಿದರು.
ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶನಿವಾರ ಬರಹಗಾರ ಎಸ್.ಮೋಹನ ಮೂರ್ತಿ ಅವರ ‘ಮನದಾಳ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಬೆಂಗಳೂರಿನ ಶುಭಪ್ರಕಾಶನದ ಜರಗನಹಳ್ಳಿ ಶಿವಶಂಕರ್ ಅವರು ಕವನ ಸಂಕಲನ ಬಿಡುಗಡೆಗೆ ಹೆಚ್ಚಿನ ಒತ್ತು ತಮ್ಮ ಪ್ರಕಾಶನದ ಮೂಲಕ ನೀಡುತ್ತಿದ್ದಾರೆ. ಇದರಿಂದ ಹೊಸ ಕವಿಗಳು ಸಾಹಿತ್ಯಲೋಕವನ್ನು ಪ್ರವೇಶಿಸಲು ಅವಕಾಶ ಲಭಿಸುವಂತಾಗಿದೆ ಎಂದರು.
ಕೂಲಿಕಾರ್ಮಿಕರಾಗಿ, ಚರಕದಲ್ಲಿ ಕಾರ್ಮಿಕರಾಗಿ ಅನೇಕ ಕಷ್ಟಗಳ ನಡುವೆ ಬದುಕು ಕಟ್ಟಿಕೊಂಡ ಮೋಹನಮೂರ್ತಿಯವರು, ತಮ್ಮ ೞಮನ ದಾಳೞಸಂಕಲನದಲ್ಲಿ ಬದುಕಿನ ಅನೇಕ ನೋವುನಲಿ ವುಗಳನ್ನು ಬಿಚ್ಚಿಡುವ ಪ್ರಯತ್ನ ನಡೆಸಿದ್ದಾರೆ. ಗಾಂಧಿ ಚಿತ್ರ ನೋಡಿ ಕವನದತ್ತ ಆಕರ್ಷಿತರಾದ ಮೂರ್ತಿಯವರು ಗಾಂಧಿತತ್ವ, ಅಹಿಂಸಾವಾದ, ದಲಿತಪರ ಚಟುವಟಿಕೆಗಳ ಬಗ್ಗೆ ತಾವು ಹೊಂದಿರುವ ಮನೋಭಿ
ಲಾಷೆಯನ್ನು ಕವನದಲ್ಲಿ ವ್ಯಕ್ತಪಡಿಸಿದ್ದಾರೆ ಎಂದರು. ಮೆಲುದನಿಯ ಮೂರ್ತಿ ಅವರು ಜೀವನಾನುಭವನಕ್ಕೆ ನೋಯುತ್ತಾರೆ, ಮಿಡಿಯುತ್ತಾರೆ. ವ್ಯಕ್ತಿಯೊಬ್ಬನ ಆಂತರ್ಯದಲ್ಲಿರುವ ನೋವು ಸಾಹಿತ್ಯದ ಮೂಲಕ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಬದಲಾದ ದಿನಮಾನಗಳಲ್ಲಿ ಹರಟೆ, ಧಾರಾವಾಹಿ, ಸಿನೆಮಾಗಳು ತಮ್ಮ ಪ್ರಪಂಚ ಎಂದುಕೊಂಡು ಬದುಕುವವರ ಸಂಖ್ಯೆ ಹೆಚಾಗಿದೆ. ಅಂತಹವರಿಗೂ ಓದಿನ ಅಭಿರುಚಿ ಹತ್ತಲು ಇಂತಹ ಕೃತಿಗಳು, ಲೇಖಕರು ಹೆಚ್ಚೆಚ್ಚು ಬರೆಯಬೇಕು ಎಂದು ತಿಳಿಸಿದರು. ಪುಸ್ತಕ ಕುರಿತು ಮಾತನಾಡಿದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ. ರಾಘವೇಂದ್ರ ಶ್ರಮಿಕಜೀವಿ ವೇ ದಮೂರ್ತಿ ಬದುಕಿನ ಅನುಭವಗಳನ್ನು ಕವನದಲ್ಲಿ ಕಟ್ಟಿಕೊಟ್ಟಿದ್ದಾರೆ. ‘ಮನದಾಳ’ ಕವನ ಸಂಕಲನವು ಸಮಾಜ ಕಟ್ಟುವ ಧ್ವನಿ ಒಳಗೊಂಡಿದೆ. ಇಂದಿನ ಕವಿಗಳಿಗೆ, ಬರಹಗಾರರಿಗೆ ಆಧುನಿಕತೆ ಬೇಕು. ಭೂತಮುಖಿ ಆಲೋಚನೆಯಿಂದ ಉತ್ತಮ ಸಾಹಿತ್ಯ ಕೃಷಿ ಸಾಧ್ಯವಿಲ್ಲ. ಭವಿಷ್ಯಮುಖಿ ಚಿಂತನೆಗಳಿಂದ ಉತ್ತಮ ಸಾಹಿತ್ಯ ಕೃತಿಗಳು ಹೊರಗೆ ಬರುತ್ತದೆ. ಮೋಹನಮೂರ್ತಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದರು. ಸಾಹಿತ್ಯ ಪರಿಷತ್ ಅಧ್ಯಕ್ಷ ಹಿತಕರಜೈನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬರಹಗಾರ ಎಸ್. ಮೋಹನ ಮೂರ್ತಿ, ನಗರಸಭೆ ಅಧ್ಯಕ್ಷ ಆರ್. ಗಣಾಧೀಶ್, ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನಕುಳಿ ಹಾಜರಿದ್ದರು.