×
Ad

ಆರೋಗ್ಯ ಕಾಪಾಡಲು ಯೋಗ ಸಹಕಾರಿ: ಎಂ.ಎಲ್.ವೈಶಾಲಿ

Update: 2016-06-12 23:23 IST

ಚಿಕ್ಕಮಗಳೂರು, ಜೂ.12: ದೇಹದ ಆರೋಗ್ಯ ಕಾಪಾಡಲು ಯೋಗ ಸಹಕಾರಿ ಎಂದು ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಹೇಳಿದರು.

ಎಡಿಸಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಯೋಗ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಯೋಗ ಮಾನವನ ಜೀವನಕ್ಕೆ ಆವಶ್ಯಕವಾಗಿದ್ದು, ಪ್ರತಿಯೊಬ್ಬರು ಪ್ರತಿದಿನ ಕನಿಷ್ಠ ಒಂದು ಗಂಟೆ ಯೋಗಾಭ್ಯಾಸ ಮಾಡಿದಲ್ಲಿ ಮನಸ್ಸು-ದೇಹ ಕ್ರಿಯಾಶೀಲವಾಗಿರುತ್ತದೆ. ಜೂ. 21ರಂದು ನಗರದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು. ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ವಿವಿಧೆಡೆ ಜೂ. 13ರಿಂದ ಜೂ. 20ರವರೆಗೆ ವಿವಿಧ ಸಂಘ-ಸಂಸ್ಥೆಗಳು ಉಚಿತ ಯೋಗ ಶಿಬಿರ ಹಮ್ಮಿಕೊಂಡಿದ್ದು. ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದರು.

ಶಿಬಿರದಲ್ಲಿ ಸರಳ ವ್ಯಾಯಾಮ, ಯೋಗಾಸನ, ಚಪ್ಪಾಳೆ ಯೋಗ, ರಾಜಯೋಗ, ಪ್ರಾಣಾಯಾಮ ಮುಂತಾದ ಯೋಗಾಸನದ ಭಂಗಿಗಳನ್ನು ವಿವಿಧ ಯೋಗ ಸಂಸ್ಥೆಗಳ ನುರಿತ ಯೋಗ ಶಿಕ್ಷಕರು ಹೇಳಿಕೊಡಲಿದ್ದು, ನಿರಂತರ ಯೋಗಾಭ್ಯಾಸವನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಡಿಡಿಪಿಐ ಎಸ್.ಜಿ.ನಾಗೇಶ್, ವಾರ್ತಾ ಧಿಕಾರಿ ಬಿ.ಮಂಜುನಾಥ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News