ದಕ್ಷಿಣ ಪದವೀಧರರ ಕ್ಷೇತ್ರ; ಜೆಡಿಎಸ್-ಬಿಜೆಪಿ ನಡುವೆ ತೀವ್ರ ಪೈಪೋಟಿ
Update: 2016-06-13 22:17 IST
ಮೈಸೂರು, ಜೂ.13:ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನಪರಿಷತ್ತಿನ ಚುನಾವಣೆಯ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ಮುಕ್ತಾಯ ಗೊಂಡಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗೆ ಅಗತ್ಯದ ಮತಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಕೆ.ಟಿ.ಶ್ರೀಕಂಠೇಗೌಡ 308 ಮತಗಳ ಮೇಲುಗೈ ಸಾಧಿಸಿದ್ದರೂ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲುವು ದಾಖಲಿಸುವಲ್ಲಿ ಮುಗ್ಗರಿಸಿದ್ದಾರೆ.
ಗೆಲುವಿಗೆ ಅವರು 23,488 ಮತಗಳನ್ನು ಪಡೆಯಬೇಕಿತ್ತು. ಆದರೆ ಅವರು ಒಟ್ಟು17,161 ಮತಗಳನ್ನು ಪಡೆದಿದ್ದಾರೆ.
ಇಲ್ಲಿನ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ದ್ವಿತೀಯ ಪ್ರಾಶಸ್ತ್ಯದ ಮತಗಳ ಮೂಲಕ ಫಲಿತಾಂಶ ನಿರ್ಧಾರವಾಗಲಿದೆ.
ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರಿಗೆ 16,823 ಮತ, ಕಾಂಗ್ರೆಸ್‌ನ ಡಾ.ಎಚ್.ಎನ್.ರವೀಂದ್ರ 8,245 ಮತಗಳನ್ನು ಗಳಿಸಿದ್ದಾರೆ.