×
Ad

ಚೀನಾದಲ್ಲಿ ರಮಝಾನ್ ಉಪವಾಸ ನಿಷೇಧ ಧಾರ್ಮಿಕ ದ್ರೋಹ: ಕಿರುಗುಂದ ಅಬ್ಬಾಸ್

Update: 2016-06-13 23:28 IST

ಮೂಡಿಗೆರೆ, ಜೂ.13: ಚೀನಾ ದೇಶದಲ್ಲಿ ಮುಸ್ಲಿಮರಿಗೆ ರಮಝಾನ್ ತಿಂಗಳ ವ್ರತಾಚರಣೆ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುವುದು, ಆ ದೇಶದಲ್ಲಿ ಮುಸ್ಲಿಮರಿಗೆ ಮಾಡಿರುವ ಧಾರ್ಮಿಕ ದ್ರೋಹವಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಕಿರುಗುಂದ ಅಬ್ಬಾಸ್ ಪ್ರತಿಪಾಧಿಸಿದ್ದಾರೆ.

ಅವರು ರವಿವಾರ ಸಂಜೆ ಮಲೆನಾಡು ಮುಸ್ಲಿಂ ವೇದಿಕೆ ವತಿಯಿಂದ ಇಲ್ಲಿನ ಜೆನೀತ್ ಸಾಮಿಲ್‌ನಲ್ಲಿ ಏರ್ಪಡಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ರಮಝಾನ್‌ನ ಉಪವಾಸ ನಿಷೇಧ ಧಾರ್ಮಿಕ ವಿಚಾರವಾದರೂ, ಒಂದು ಸಮುದಾಯಕ್ಕೆ ಚೀನಾ ದೇಶದ ಆಡಳಿತಾರೂಡ ಸರಕಾರ ಮಾಡಿರುವ ದ್ರೋಹ ಎಂದು ಅಭಿಪಾರಯಿಸಿದರು.

ಭಾರತದ ಸರಕಾರ ಸೇರಿದಂತೆ ಇತರ ದೇಶಗಳು ಚೀನಾದ ಮೇಲೆ ಒತ್ತಡ ತಂದು ಈ ನಿಷೇಧವನ್ನು ಹಿಂಪಡೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಝಾಕೀರ್ ಹುಸೈನ್ ಹೊರಟ್ಟಿ ಮಾತನಾಡಿ, ಮಲೆನಾಡು ಮುಸ್ಲಿಂ ವೇದಿಕೆ ಸದಸ್ಯರೊಂದಿಗೆ ಚರ್ಚಿಸಿ ಮುಸ್ಲಿಮರಿಗಾಗಿ ಕೋ-ಆಪರೇಟೀವ್ ಸೊಸೈಟಿ ಎಂಬ ಬ್ಯಾಂಕ್ ತೆರೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ವೇದಿಕೆ ಅಧ್ಯಕ್ಷ ಸಿ.ಕೆ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ವೇದಿಕೆಯ ಕಾರ್ಯಾಧ್ಯಕ್ಷ ಬಿದರಹಳ್ಳಿ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಜೀದ್, ಮುಖಂಡರಾದ ಬಿ.ಎಚ್.ಆದಂ ಹಾಜಿ, ಮುಹಮ್ಮದ್ ಶಬ್ಬೀರ್, ಬಿ.ಎಚ್. ಮುಹಮ್ಮದ್, ಎ.ಸಿ. ಅಯ್ಯೂಬ್ ಹಾಜಿ, ಶರೀಫ್, ಮೈಸ್, ಅಕ್ರಂ ಹಾಜಿ, ಕೌಸರ್ ಅಬ್ದುಲ್ಲಾ ಹಾಜಿ, ರೆಹರ್ ಅಲಿ, ಹಂಡುಗುಳಿ ರಝಾಕ್, ಝಾಕೀರ ಹುಸೈನ್ ಆಲ್ದೂರು, ಫಿಶ್ ಮೋಣು, ಅಹ್ಮದ್ ಬಾವ ಬಿಳಗುಳ, ಯಾಕೂಬ್ ಗೋಣಿಗದ್ದೆ, ಸಿರಾಜುದ್ದೀನ್, ಅಂಜುಮಾನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಹಾಜಿ ಶಫೀವುಲ್ಲಾ ನಿಝಾಮಿ, ಮಝೂರ್, ಶಹಜಾನ್ ಹಾಂದಿ, ಶಫೀಯುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News