×
Ad

ತಾಲೂಕು ಕಸಾಪದಿಂದ ಪರಿಸರ ದಿನಾಚರಣೆ

Update: 2016-06-13 23:37 IST

ತರೀಕೆರೆ, ಜೂ.13: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತರೀಕೆರೆ ವತಿಯಿಂದ ಪಟ್ಟಣದ ಪುರಸಭೆ ಮುಂಭಾಗ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹಾಗೂ ಕನ್ನಡ ನೆಲದ ಪ್ರಮುಖರ ಹೆಸರಲ್ಲಿ ಸಸಿಗಳನ್ನು ನೆಡಲು ದತ್ತು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದ ಶಾಸಕ ಜಿ.ಎಚ್.ಶ್ರೀನಿವಾಸ್ ದೇಶದ ಸರ್ವೋಚ್ಚ ನ್ಯಾಯಾಲಯವು ಸಹ ಹಸಿರು ಪೀಠ ಸ್ಥಾಪಿಸಿದ್ದು, ಪರಿಸರದ ನೇರ ಹೊಣೆ ಹೊತ್ತುಕೊಂಡಿದೆ. ತಾಲೂಕಿನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಬಿಸಿಲು ಕಂಡಿದೆ. ಎಲ್ಲ ನಾಗರಿಕರು ಎಚ್ಚೆತ್ತುಕೊಂಡು ಪರಿಸರ ಉಳಿಸಲು ಪ್ರಯತ್ನಿಸಬೇಕಿದೆ ಎಂದರು.

ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ ಕುಮಾರ್ ಮಾತನಾಡಿ, ಸರಕಾರ ಅರಣ್ಯ ಬೆಳೆಸಲು ನೆಡುತೋಪು ಹಾಗೂ ಅರಣ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾಹಿತ್ಯ ಪರಿಷತ್ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸಾಹಿತಿಗಳ ಹೆಸರಿನಲ್ಲಿ ಸಸಿ ವಿತರಿಸಲು ಸಂತಸವಾಗುತ್ತಿದೆ ಎಂದರು.

ಶ್ರೀಗಂಧ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್.ವಿಶುಕುಮಾರ್ ಮಾತನಾಡಿ, ಆಸಕ್ತರು ಶ್ರೀಗಂಧದ ಮರಗಳ ಬೆಳೆಸಲು ಸಹಕರಿಸಲಾಗುವುದು ಎಂದರು.

ಮಾಜಿ ಪುರಸಭೆ ಸದಸ್ಯ ಟಿ.ಎಂ. ಭೋಜರಾಜ್, ಪುರಸಭೆ ಅಧ್ಯಕ್ಷ ಟಿ.ಟಿ.ನಾಗರಾಜು, ವಕೀಲ ಇರ್ಫಾನ್ ಅಹ್ಮದ್ ಬೇಗ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರಿನ ಸಸಿಗಳ ವಾಣಿಜ್ಯ ತೆರಿಗೆ ಅಧಿಕಾರಿ ಹಾಲವಜ್ರಪ್ಪ ಹಾಗೂ ಕನ್ನಡ ನೆಲದ ಪ್ರಮುಖರ ಹೆಸರಿನ ಸಸಿಗಳ ನವ ಕರ್ನಾಟಕ ಯುವ ಶಕ್ತಿ ಕಾರ್ಯಕರ್ತರು ದತ್ತು ಸ್ವೀಕರಿಸಿದರು.

ತಾಲೂಕು ಕಸಾಪ ಅಧ್ಯಕ್ಷ ದಾದಾಪೀರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪುರಸಭೆ ಸದಸ್ಯ ಟಿ.ಆರ್. ಶ್ರೀಧರ್, ಕಸಬಾ ಹೋಬಳಿ ಕಸಾಪ ಅಧ್ಯಕ್ಷ ದೇವಾನಂದ್, ಅರಣ್ಯಾಧಿಕಾರಿ ಸಂಗನಾಯ್ಕ, ಒಡನಾಡಿ ಸಂಘಟನೆ ಉಪಾಧ್ಯಕ್ಷ ಧರನೇಶ್, ಕಸಾಪ ಕೋಶಾಧ್ಯಕ್ಷ ಟಿ.ಜಿ.ಸದಾನಂದ್, ಕಾರ್ಯದರ್ಶಿ ನವೀನ್ ಪೆನ್ನಯ್ಯ, ಸಂಘಟನಾ ಕಾರ್ಯದರ್ಶಿ ಮಧುಸೂದನ್ ಕಕ್ರಿ, ತಿಪ್ಪೇಶ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News